ಬ್ರಹ್ಮಾವರ : ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಮ್ಮಿಲನ ಮತ್ತು ಆರೋಗ್ಯ ತಪಾಸಣಾ ಶಿಬಿರ
Published
0
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಗಾಯ ಬೇಗ ಗುಣವಾಗದಿರುವುದು ಕೇವಲ ಸಕ್ಕರೆ ಖಾಯಿಲೆಯಿಂದ ಮಾತ್ರ ಅಲ್ಲ ಅನೇಕ ಕಾರಣ ಇರುತ್ತದೆ ಎಂದು ಮಾಹೆ ಮಣಿಪಾಲದ ಡೀನ್ ಡಾ, ಕೃಷ್ಣಾನಂದ ಪ್ರಭು ಹೇಳಿದರು.
ಮಂಗಳವಾರ ಬ್ರಹ್ಮಾವರ ಆಶ್ರಯ ಹೋಟೇಲ್ ಸಭಾಂಗಣದಲ್ಲಿ ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಮ್ಮಿಲನ ಮತ್ತು ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಅನೇಕ ಖಾಯಿಲೆಗಳು ಮನೋಬಲ ಹೀನತೆಯಿಂದ ಬರುತ್ತದೆ. ನಿವೃತಿಯಾದ ಕೂಡಲೆ ಖಾಯಿಲೆ ಬರಲೇ ಬೇಕು ಎಂದು ಇಲ್ಲ. ಆಗಾಗ ಆರೋಗ್ಯ ತಪಾಸಣೆ ಮಾಡುತ್ತಿರುವುದು ಉತ್ತಮ ಎಂದರು.
ಬಸ್ರೂರು ರಾಜೀವ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ವಿಜಯ ಬ್ಯಾಂಕ್ ಸ್ಥಾಪಕರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
Advertisement. Scroll to continue reading.
ಇದೇ ಸಂದರ್ಭದಲ್ಲಿ ನಿವೃತ್ತ ಅಧಿಕಾರಿಗಳ ಕುಟುಂಬದವರ ಉಚಿತ ಆರೋಗ್ಯ ತಪಾಸಣೆ ಜರುಗಿತು. ಆರೋಗ್ಯದ ಕಿಟ್ ವಿತರಣೆ ಮಾಡಲಾಯಿತು.
ಲಯನ್ ಹರಿಪ್ರಸಾದ್ ರೈ, ಅಣ್ಣಪ್ಪ ಶೆಟ್ಟಿ, ವಿ ,ಸುಬ್ಬಯ್ಯ ಹೆಗ್ಡೆ, ಜಯರಾಮ ಹೆಗ್ಡೆ, ಸಂಕಯ್ಯ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು. ನಿವೃತ್ತರು ಕುಟುಂಭ ಸಮೇತರಾಗಿ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಜಶ್ರೀ ಸುಧಾರಾಮ್ ಕಾರ್ಯಕ್ರಮ ನಿರೂಪಿಸಿದರು.