ಅಮೆರಿಕದ ಇಂಡಿಯಾನಾ ರಾಜ್ಯದಲ್ಲಿ 24 ವರ್ಷದ ಭಾರತೀಯ ವಿದ್ಯಾರ್ಥಿಯೊಬ್ಬನಿಗೆ ಇರಿಯಲಾಗಿದೆ. ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ವರುಣ್ ರಾಜ್ ಇರಿತಕ್ಕೊಳಗಾಗಿರುವ ವಿದ್ಯಾರ್ಥಿ.
Advertisement. Scroll to continue reading.
ಇಂಡಿಯಾನಾದ ಜಿಮ್ನಲ್ಲಿ ಚಾಕುವಿನಿಂದ ಇರಿಯಲಾಗಿದೆ ಎಂದು ತಿಳಿದುಬಂದಿದೆ. ಜೋರ್ಡಾನ್ ಆಂಡ್ರಾಡ್ (24) ಭಾನುವಾರ ಬೆಳಿಗ್ಗೆ ಇಂಡಿಯಾನಾದ ವಾಲ್ಪಾರೈಸೊ ನಗರದಲ್ಲಿ ವರುಣ್ ರಾಜ್ಗೆ ಇರಿದಿದ್ದಾನೆ. ಈ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ ಎಂದು ಲ ವರದಿಯಾಗಿದೆ.
ವರುಣ್ ವಾಲ್ಪಾರೈಸೊ ವಿಶ್ವವಿದ್ಯಾಲಯದಲ್ಲಿ ಎಂಎಸ್ ಓದುತ್ತಿದ್ದು, ತೆಲಂಗಾಣದ ಖಮ್ಮಂ ಪಟ್ಟಣದವರಾಗಿದ್ದಾರೆ. ವರುಣ್ ಮೆದುಳಿನ ಕಾಂಡಕ್ಕೆ ಗಾಯವಾಗಿದ್ದು, ಅವರನ್ನು ಫೋರ್ಟ್ ವೇನ್ನಲ್ಲಿರುವ ಲುಥೆರನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.
Advertisement. Scroll to continue reading.