ಸಿನಿಮಾ

ಖ್ಯಾತ ನಟ ಟೈಲರ್ ಕ್ರಿಸ್ಟೋಫರ್ ಇನ್ನಿಲ್ಲ

1

ಖ್ಯಾತ ಹಾಲಿವುಡ್‌ ನಟ ಟೈಲರ್ ಕ್ರಿಸ್ಟೋಫರ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 50 ವರ್ಷ ವಯಸ್ಸಾಗಿತ್ತು.

ಈ ಬಗ್ಗೆ ನಟ ಮಾರಿಸ್ ಬೆನಾರ್ಡ್ ಅವರು ಇನ್ಸ್ಟಾಗ್ರಾಮ್‌ ನಲ್ಲಿ ಪೋಸ್ಟ್‌ ಮೂಲಕ ತಿಳಿಸಿದ್ದಾರೆ.

ಸ್ಯಾನ್ ಡಿಯಾಗೋ ಅಪಾರ್ಟ್ಮೆಂಟ್ ನಲ್ಲಿ  ಟೈಲರ್ ಕ್ರಿಸ್ಟೋಫರ್‌ ನಿಧನರಾಗಿದ್ದಾರೆ ಎಂದು ಹೇಳಿದ್ದಾರೆ.

Advertisement. Scroll to continue reading.

“ಟೈಲರ್ ಕ್ರಿಸ್ಟೋಫರ್ ಅವರ ನಿಧನದ ಸುದ್ದಿಯನ್ನು ಬಹಳ ದುಃಖದಿಂದ ಹಂಚಿಕೊಳ್ಳುತ್ತಿದ್ದೇನೆ. ಟೈಲರ್ (ಅ.31 ರಂದು, ಮಂಗಳವಾರ) ಬೆಳಿಗ್ಗೆ ಅವರ ಸ್ಯಾನ್ ಡಿಯಾಗೋ ಅಪಾರ್ಟ್ಮೆಂಟ್ ನಲ್ಲಿ ಹೃದಯ ಸ್ತಂಭನವಾಗಿ ನಿಧನರಾದರು. ಟೈಲರ್ ಯೊಬ್ಬ ಪ್ರತಿಭಾವಂತ ವ್ಯಕ್ತಿಯಾಗಿದ್ದು, ಅವರು ನಟಿಸಿದ ಪ್ರತಿಯೊಂದು ಚಿತ್ರದಲ್ಲೂ ಮಿಂಚಿದರು. ಅವರು ನಟನೆಯಿಂದ ಅಭಿಮಾನಿಗಳಲ್ಲಿ ಸಂತೋಷವನ್ನು ತರುತ್ತಿದ್ದರು. ಟೈಲರ್ ಉತ್ತಮ ಮಾನಸಿಕ ಆರೋಗ್ಯ ಚಿಕಿತ್ಸೆಗೆ ಒಳಗಾಗಬೇಕಿತ್ತು. ಅವರು ಬೈಪೋಲಾರ್ ಖಿನ್ನತೆ ಮತ್ತು ಮದ್ಯಚಟದಿಂದಾದ ಕಷ್ಟದ ಬಹಿರಂಗವಾಗಿ ಮಾತನಾಡಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಮಾರಿಸ್ ಬೆನಾರ್ಡ್ ಪೋಸ್ಟ್‌ ನಲ್ಲಿ ಹೇಳಿದ್ದಾರೆ.

ಕ್ರಿಸ್ಟೋಫರ್ ನವೆಂಬರ್ 11, 1972 ರಂದು ಜನಿಸಿದರು. ‘ಜನರಲ್ ಹಾಸ್ಪಿಟಲ್‌ ಮೂಲಕ ಖ್ಯಾತಿಗಳಿಸಿದ್ದರು. ನಿಕೋಲಸ್ ಕ್ಯಾಸಡೈನ್ (1996 ರಿಂದ 2016) ಕಾನರ್ ಬಿಷಪ್ (2004 ರಿಂದ 2005) ಪಾತ್ರದ ಮೂಲಕ ಜನಪ್ರಿಯರಾಗಿದ್ದರು. ‘ಡೇಸ್ ಆಫ್ ಅವರ್ ಲೈವ್ಸ್’ ನಲ್ಲಿ ಸ್ಟೀಫನ್ ಡಿಮೆರಾ ಅವರ ಪಾತ್ರ ಖ್ಯಾತಿ ಗಳಿಸಿತ್ತು.

ಅವರು 2002 ರಲ್ಲಿ “ಡೆಸ್ಪರೇಟ್ ಹೌಸ್ ವೈವ್” ತಾರೆ ಇವಾ ಲಾಂಗೋರಿಯಾ ವಿವಾಹವಾದರು. 2004 ರಲ್ಲಿ ಅವರಿಂದ ದೂರವಾಗಿ, 2008 ರಲ್ಲಿ ಮಾಜಿ ಇಎಸ್ಪಿಎನ್ ವರದಿಗಾರ ಬ್ರಿಯೆನ್ ಪೆಡಿಗೆ ಅವರನ್ನು ವಿವಾಹವಾದರು. 2021 ರಲ್ಲಿ ಅವರಿಂದ ದೂರವಾದರು. ಕ್ರಿಸ್ಟೋಫರ್ ಮತ್ತು ಪೆಡಿಗೊ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com