ಬ್ರಹ್ಮಾವರ : ಅಜಪುರ ಕರ್ನಾಟಕ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಬ್ರಹ್ಮಾವರ ಎಸ್ ಎಂ ಎಸ್ ಪದವಿ ಪೂರ್ವ ಕಾಲೇಜಿನಿಂದ ಕನ್ನಡ ತಾಯಿ ಭುವನೇಶ್ವರಿ ಮೆರವಣಿಗೆ ಜಾಥಾ ಬುಧವಾರ ಬೆಳಿಗ್ಗೆ ನಡೆಯಿತು.
ಎಸ್ ಎಂ ಎಸ್ ಕಾಲೇಜಿನ ಬಳಿಯಿಂದ ಹೊರಟ ಜಾಥಾಕ್ಕೆ ಬ್ರಹ್ಮಾವರ ತಾಲೂಕು ತಹಶೀಲ್ದಾರ ಶ್ರೀಕಾಂತ್ ಹೆಗ್ಡೆ ಚಾಲನೆ ನೀಡಿದರು.
Advertisement. Scroll to continue reading.
ಉಪ ತಹಶೀಲ್ದಾರ ರಾಘವೇಂದ್ರ , ಅಜಪುರ ಸಂಘದ ಪಧಾಧಿಕಾರಿಗಳಾದ ಅಶೋಕ್ ಭಟ್ , ದಿನಕರ ಶೆಟ್ಟಿ, ನಾರಾಯಣ ಮಡಿ, ಗಿರೀಶ್ ಅಡಿಗ ಕಾಲೇಜಿನ ಪ್ರಿನ್ಸಿಪಾಲ್ ಐವನ್ ದೋನಾತ್ ಸುವಾರೀಸ , ಸರಕಾರಿ ಪಿಯು ಕಾಲೇಜಿನ ಉಪ ಪ್ರಾಂಶುಪಾಲೆ ಉಮಾ ಇನ್ನಿತರರು ಜಾಥಾ ದಲ್ಲಿದ್ದರು.
ಶಾಲಾ ವಿದ್ಯಾರ್ಥಿಗಳ ಬ್ಯಾಂಡ್ ವಾದನ, ನಾನಾ ಟ್ಯಾಬ್ಲೊ ಗಳು, ಚಂಡೆ ಬಳಗ ಜಾಥಾದಲ್ಲಿದ್ದು ಜಾಥಾಕ್ಕೆ ಮೆರಗು ನೀಡಿತ್ತು. ಆಕಾಶ ವಾಣಿ ವೃತ್ತದ ಬಳಿಯಿಂದ ಸಾಗಿ ಬಂದು ಸರಕಾರಿ ಪದವಿ ಪೂರ್ವ ಕಾಲೇಜಿನ ಬಳಿ ಸಮಾಪನಗೊಂಡಿತು.