ಪಡುಬಿದ್ರಿ : ಬೈಕೊಂದು ಬಸ್ಸಿಗೆ ಡಿಕ್ಕಿ ಹೊಡೆದು ಬೈಕಿನಲ್ಲಿದ್ದ ಯುವಕ ರಸ್ತೆಗೆ ಎಸೆಯಲ್ಪಟ್ಟು ಆತನ ಮೇಲೆ ಟ್ಯಾಂಕರ್ ಹರಿದ ಪರಿಣಾಮ ಸಾವನ್ನಪ್ಪಿದ ಘಟನೆ ಪಡುಬಿದ್ರಿ ಪೇಟೆಯಲ್ಲಿ ನಡೆದಿದೆ.
ಮೃತನನ್ನು ಕಂಚಿನಡ್ಕ ನಿವಾಸಿ ಪ್ರಜ್ವಲ್(19) ಎಂದು ಗುರುತಿಸಲಾಗಿದೆ. ಮಂಗಳೂರು ಕಡೆಗೆ ತೆರಳುವ ಬಸ್ಸು ನಿಲ್ದಾಣದಲ್ಲಿ ಹೆದ್ದಾರಿಯಲ್ಲಿ ಖಾಸಗಿ ಬಸ್ಸು ಪ್ರಯಾಣಿಕರನ್ನು ಇಳಿಸಲು ನಿಲ್ಲಿಸಲಾಗಿತ್ತು.
ಈ ವೇಳೆ ಹಿಂಬದಿಯಲ್ಲಿದ್ದ ಬೈಕ್ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಪ್ರಜ್ವಲ್ ರಸ್ತೆಗೆ ಎಸೆಯಲ್ಪಟ್ಟಿದ್ದಾನೆ. ಇದೇ ವೇಳೆ ಟ್ಯಾಂಕರ್ ಆತನ ಮೇಲೆ ಹರಿದ ಪರಿಣಾಮ ಟ್ಯಾಂಕರ್ ಚಕ್ರದಡಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.