ಕರಾವಳಿ

ಬಾರಕೂರು ಬಳಿಯ ಬಂಡೀಮಠದಲ್ಲಿ ಬೋನಿಗೆ ಬಿದ್ದ ಚಿರತೆ

1

ವರದಿ : ಬಿ.ಎಸ್.ಆಚಾರ್ಯ


ಬ್ರಹ್ಮಾವರ : ಬಾರಕೂರು ಬಳಿಯ ಬಂಡೀಮಠ ಪರಿಸರದಲ್ಲಿ ಕೆಲವು ದಿನದಿಂದ ಸಾರ್ವಜನಿಕರಿಗೆ ತೀರಾ ಭಯ ಹುಟ್ಟಿಸಿದ ಚಿರತೆ ಭಾನುವಾರ ನಸುಕಿನಲ್ಲಿ ಅರಣ್ಯ ಇಲಾಖೆಯವರು ಇರಿಸಲಾಗಿದ್ದ ಬೋನಿಗೆ ಬಿದ್ದಿದೆ.


ಇಲ್ಲಿನ ರಸ್ತೆ ಬದಿಯಲ್ಲಿರುವ ರವಿಯವರ ಮನೆಯ ಬಳಿ ಅರಣ್ಯ ಇಲಾಖೆಯವರು 3 ದಿನದ ಹಿಂದೆ ಬೋನನ್ನು ಇರಿಸಲಾಗಿದ್ದು, ಶನಿವಾರ ಸಂಜೆ ರವಿಯವರು ಮನೆಯ ಕೋಳಿಯೊಂದನ್ನು ಬೋನಿಗೆ ಹಾಕಿದ್ದರು.

Advertisement. Scroll to continue reading.


ಆಹಾರದ ಆಸೆಗೆ ಬಂದ 5 ವರ್ಷದ ಗಂಡು ಚಿರತೆ ರಾತ್ರಿ 2 ಗಂಟೆ ಸಮಯಕ್ಕೆ ಬೋನಿನಲ್ಲಿ ಸಿಲುಕಿ ಕೊಂಡಿದೆ. ಸುದ್ದಿ ತಿಳಿದ ಉಪವಲಯ ಅರಣ್ಯಾಧಿಕಾರಿ ಹರೀಶ್ ಕೆ ಇಲಾಖೆಯ ಮೇಲಧಿಕಾರಿಗಳಿಗೆ ಗಮನಕ್ಕೆ ತಂದಿದ್ದರು.
ಆರ್ ಎಫ್ ಓ ವಾರಿಜಾಕ್ಷಿ ಅವರು ಘಟನೆಯ ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆ ವನ ಪಾಲಕರು ಸಿಬ್ಬಂದಿಗಳಾದ ಸುರೇಶ್, ವಿತೇಶ್, ರಮೇಶ್, ಅಭಿಲಾಷ್, ಮಂಜುನಾಥ್ , ಮನೀಶ್, ಸುರೇಶ್ ದೇವಾಡಿಗ, ಲಕ್ಷ್ಮಣ್, ಅಶ್ವಿನ್ , ಹರೀಶ್ ಸಾರ್ವಜನಿಕರ ನೆರವಿನಿಂದ ಮತ್ತೊಂದು ಬೋನಿಗೆ ಹಾಕಿ ಚಿರತೆಯನ್ನು ಪಶ್ವಿಮ ಘಟ್ಟದ ತಪ್ಪಲು ಪ್ರದೇಶಕ್ಕೆ ಬಿಡಲಾಗಿದೆ.


ಚಿರತೆ ಬೋನಿಗೆ ಬಿದ್ದ ಸುದ್ದಿ ತಿಳಿದು ತಂಡೊಂಪತಂಡವಾಗಿ ಬಂದ ಗ್ರಾಮದ ಜನರು ಕೆಲವು ದಿನದಿಂದ ತೀರಾ ಭಯ ಬೀತರಾಗಿದ್ದು ಇಂದು ಅತಂಕ ದೂರವಾಗಿದೆ.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com