ಕ್ರೀಡೆ

ಮ್ಯಾಥ್ಯೂಸ್ ‘ಟೈಮ್ಡ್ ಔಟ್’; ಶಕೀಬ್ 2023ರ ವಿಶ್ವಕಪ್‌ ಟೂರ್ನಿಯಿಂದಲೇ ಔಟ್!

0

ನವದೆಹಲಿ: ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ ನಾಕೌಟ್ ಹಂತಕ್ಕೂ ಮುನ್ನ ಬಾಂಗ್ಲಾದೇಶ ದೊಡ್ಡ ಹಿನ್ನಡೆಯಾಗಿದೆ. ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಟೂರ್ನಿಯಿಂದ ಔಟ್ ಆಗಿದ್ದಾರೆ. 

ನವೆಂಬರ್ 6ರಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ಬ್ಯಾಟಿಂಗ್ ಮಾಡುವಾಗ ಶಕೀಬ್ ಅಲ್ ಹಸನ್ ಗಾಯಗೊಂಡಿದ್ದರು. ಅವರ ಕೈ ಬೆರಳಿಗೆ ಗಾಯವಾಗಿತ್ತು. ಇದರಿಂದ ಟೂರ್ನಿಯಿಂದ ಹೊರಹೋಗಿದ್ದಾರೆ. 

ಶ್ರೀಲಂಕಾ vs ಬಾಂಗ್ಲಾದೇಶ ಪಂದ್ಯದ ನಂತರ ಶಕೀಬ್ ಅಲ್ ಹಸನ್ ಅವರ ಬೆರಳಿನ ಮೂಳೆ ಮುರಿತ ಎಕ್ಸ್-ರೇನಲ್ಲಿ ದೃಢಪಟ್ಟಿದೆ. ಈ ಕಾರಣದಿಂದಾಗಿ, ಅವರು ಈಗ ನವೆಂಬರ್ 11ರಂದು ಪುಣೆಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಮತ್ತು ಉಳಿದ ವಿಶ್ವಕಪ್‌ ಪಂದ್ಯಗಳಿಂದ ಅವರು ಹೊರಗುಳಿದಿದ್ದಾರೆ.

Advertisement. Scroll to continue reading.

ಶಕೀಬ್ ಅಲ್ ಹಸನ್ ಶ್ರೀಲಂಕಾ ವಿರುದ್ಧ 65 ಎಸೆತಗಳಲ್ಲಿ 82 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಈ ವೇಳೆ ಶಕೀಬ್ ಅಲ್ ಹಸನ್ 12 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿದರು. ಶಕೀಬ್ ಅಲ್ ಹಸನ್ ಅವರ 82 ರನ್‌ಗಳ ಇನ್ನಿಂಗ್ಸ್‌ನಿಂದಾಗಿ ಬಾಂಗ್ಲಾದೇಶವು ಕಠಿಣ ಪಂದ್ಯದಲ್ಲಿ ಶ್ರೀಲಂಕಾವನ್ನು 3 ವಿಕೆಟ್‌ಗಳಿಂದ ಸೋಲಿಸಿತು.

ಮ್ಯಾಥ್ಯೂಸ್ ಟೈಮ್ಡ್ ಔಟ್ ವಿವಾದ :
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಏಂಜೆಲೊ ಮ್ಯಾಥ್ಯೂಸ್ ಜೊತೆಗಿನ ವಾಗ್ವಾದದ ನಂತರ ಶಕೀಬ್ ಅಲ್ ಹಸನ್ ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ. ಶ್ರೀಲಂಕಾ ತಂಡ ಬ್ಯಾಟಿಂಗ್ ಮಾಡುತ್ತಿದ್ದಾಗ, ಇನಿಂಗ್ಸ್‌ನ 25ನೇ ಓವರ್‌ನಲ್ಲಿ ಮ್ಯಾಥ್ಯೂಸ್ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಬಂದರು ಆದರೆ ಅವರ ಹೆಲ್ಮೆಟ್ ಮುರಿದಿತ್ತು. ಹೀಗಾಗಿ ಮ್ಯಾಥ್ಯೂಸ್ ಹೆಲ್ಮೆಟ್ ಬದಲಾಯಿಸಲು 2 ನಿಮಿಷಕ್ಕೂ ಹೆಚ್ಚು ಸಮಯ ತೆಗೆದುಕೊಂಡರು. ಈ ನಡುವೆ ಶಕೀಬ್ ಮ್ಯಾಥ್ಯೂಸ್ ಅವರನ್ನು ಔಟ್ ಎಂದು ಘೋಷಿಸುವಂತೆ ಅಂಪೈರ್‌ಗೆ ಮನವಿ ಮಾಡಿದರು.

ಅಂತಿಮವಾಗಿ ಅಂಪೈರ್ ಮ್ಯಾಥ್ಯೂಸ್ ಅವರನ್ನು ಔಟ್ ಘೋಷಿಸಿದರು. ಈ ಸಂದರ್ಭದ ಶಕೀಬ್ ವರ್ತನೆ ಟೀಕೆಗೆ ಗುರಿಯಾಗಿತ್ತು.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com