ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ವಾರಂಬಳ್ಳಿ ಗ್ರಾಮದ ತೆಂಕು ಬಿರ್ತಿಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ರಾತ್ರಿ ಹೊತ್ತು ಮದ್ಯಪಾನ ಮಾಡಿದ ಬಗ್ಗೆ ಸವಿತಾ ಎನ್ನುವ ಮಹಿಳೆಯಿಂದ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣದ ಕುರಿತು ದೂರು ದಾಖಲಾಗಿದೆ.
ದಲಿತ ಮುಖಂಡರು ಗ್ರಾಮ ಪಂಚಾಯತಿ ಅಥವಾ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯದೇ ಅಂಬೇಡ್ಕರ್ ಭವನವನ್ನು ದುರುಪಯೋಗ ಪಡಿಸಿ ಕಾನೂನು ಬಾಹಿರವಾಗಿ ಮದ್ಯಪಾನ ಮಾಡಿ ಅಂಬೇಡ್ಕರ್ ಭವನಕ್ಕೆ ಚ್ಯುತಿ ತರಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Advertisement. Scroll to continue reading.
ಆ ಕುರಿತು ವಿಡಿಯೋ ಮಾಡಿದುದಕ್ಕೆ ಮತ್ತು ಪ್ರಶ್ನೆ ಮಾಡಿದುದಕ್ಕೆ ಆರೋಪಿಗಳು ಬೆದರಿಕೆ ಹಾಕಿ ಅವಾಚ್ಯ ಶಬ್ಧದಿಂದ ನಿಂದಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನ್ಯಾಯಾಂಗ ಇಲಾಖೆಯಲ್ಲಿ ಕಾರ್ಯ ನಿರ್ವಯಿಸುವ ಸವಿತಾ, ಇಲ್ಲಿನ ಪರಿಸರದ ಮಕ್ಕಳ ಶಿಕ್ಷಣ ಕುರಿತ ಉತ್ತಮ ಕಾರ್ಯಕ್ರಮಕ್ಕೆ ಭವನವನ್ನು ಕೇಳಿದಾಗ ನೀಡದೆ ಎಣ್ಣೆ ಪಾರ್ಟಿಗೆ ಬಳಸಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರಿಗೆ ಅಪಮಾನ ಮಾಡಲಾಗಿದೆ ಎಂದು ದೂರಿನಲ್ಲಿದೆ.
Advertisement. Scroll to continue reading.