ಕುಂದಾಪುರ : ಕಳೆದ ಆರು ವರ್ಷಗಳಿಂದ ಅಮ್ಮಾ ಪಟಾಕಿ ಮೇಳದ ಶಶಿರಾಜ್, ವಿಶ್ವರಾಜ್ ಹಾಗೂ ವಿಜಯ್ ಈ ಮೂವರ ತಂಡವು ಅನಾರೋಗ್ಯ ಪೀಡಿತ ಹಾಗೂ ಅಶಕ್ತರ ಪಾಲಿಗೆ ನೆರವಾಗುತ್ತಿದ್ದಾರೆ.
ಕುಂದಾಪುರ ನೆಹರು ಮೈದಾನದಲ್ಲಿ ದೀಪಾವಳಿ ಹಬ್ಬದ ಸಂದರ್ಭ ಪಟಾಕಿ ಮೇಳ ಹಸರಿನ ಅಂಗಡಿಯನ್ನು ತೆಗೆದು ಸಾರ್ವಜನಿಕರಿಗೆ ಕಡಿಮೆ ಬೆಲೆಗೆ ಮಾರುವುದಲ್ಲದೆ ಅದರಿಂದ ಬಂದ ಲಾಭದ ಹಣದ ಭಾಗವನ್ನು ಅನಾರೋಗ್ಯ ಪೀಡಿತರು ಹಾಗೂ ಅಶಕ್ತರಿಗೆ ನೀಡುವ ಕಾರ್ಯ ಮಾಡುತ್ತಾರೆ.
Advertisement. Scroll to continue reading.
ಈ ವರ್ಷ ಕುಂದಾಪುರ ಕೋಣಿ ಸಮೀಪದ ಮಾನಸ ಜ್ಯೋತಿ ಸಂಸ್ಥೆಗೆ ಆರ್ಥಿಕವಾಗಿ ನೆರವನ್ನು ನೀಡಿದ್ದಾರೆ.
ನೆರವು ಹಸ್ತಾಂತರ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಗಿರೀಶ್ ಜಿ.ಕೆ .(ಪುರಸಭೆ ಸದಸ್ಯ),ವಿಕಾಸ್ ಹೆಗ್ಡೆ, (ಜಿಲ್ಲಾ ಕಾಂಗ್ರೆಸ್ ವಕ್ತಾರ), ಶಂಕರ ಅಂಕದಕಟ್ಟೆ (ಕುಂದಾಪುರ ಬಿ.ಜೆ.ಪಿ ಮಂಡಳ ಅಧ್ಯಕ್ಷರು), ಪ್ರಸಾದ (ಕುಂದಾಪುರ ಪೊಲೀಸ್ ಠಾಣಾ ಉಪನೀರಿಕ್ಷಕರು), ಪ್ರಶಾಂತ್, ನಟೇಶ್, ನಾಗೇಶ್, ನಾಗರಾಜ್, ಪ್ರಸಾದ್, ಅಶೋಕ್, ಅಭಿಷೇಕ್ ಮೊದಲಾದವರು ಉಪಸ್ಥಿತರಿದ್ದರು.
Advertisement. Scroll to continue reading.