ಬಾರಕೂರು ದೇವರ ಮಂಟಪದಲ್ಲಿ ದೀಪಾವಳಿ ಸಂಭ್ರಮ ಹೆಚ್ಚಿಸಿದ ಸಭ್ಯ ಫ್ರೆಂಡ್ಸ್
Published
0
ವರದಿ : ಬಿ.ಎಸ್.ಆಚಾರ್ಯ
ಬಾರ್ಕೂರು : ದೇವಾಲಯಗಳ ನಗರ ಬಾರಕೂರಿನ ನಗರ ಮಧ್ಯ ಭಾಗದಲ್ಲಿ ದೇವರ ಉತ್ಸವ ಮೂರ್ತಿಯನ್ನು ಇಟ್ಟು ಪೂಜಿಸುವ ಕಲ್ಲುಚಪ್ಪರಕ್ಕೆ ಬುಧವಾರ ಸಭ್ಯ ಫ್ರೆಂಡ್ಸ್ ವತಿಯಿಂದ 19 ನೇ ವರಷದ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಲಾಯಿತು.
ಸಾಂಪ್ರದಾಯಕವಾಗಿ ಒಂದು ಸಾವಿರಕ್ಕೂ ಹೆಚ್ಚು ಮಣ್ಣಿನ ಹಣತೆಯಲ್ಲಿ ದೀಪ ಹಚ್ಚಿ, ಪೀಠದಾಕಾರದಲ್ಲಿರುವ ಕುಸುರಿ ಕೆತ್ತನೆಯ ಶಿಲಾ ಶಿಲ್ಪದ ಮೆರುಗು ಹೆಚ್ಚಿಸಲು ಬಣ್ಣದ ಬೆಳಕಿನ ಚಿತ್ತಾರ ಕೂಡಾ ಮೆರಗು ನೀಡಿತ್ತು.
ಸಭ್ಯ ಪ್ರೆಂಡ್ಸ್‌ನ ವಿನಯ, ಸಚಿನ್,ಮಹೇಶ, ಮುರಳಿ, ಪ್ರದೀಪ, ಹರೀಶ, ನಾರಾಯಣ ನಾಯ್ಕ್, ಪ್ರಶಾಂತ ಗುರುರಾಜ್, ಸಭ್ಯ ಪ್ರೆಂಡ್ಸ್‌ನ ಇನ್ನಿತರರು ನೇತೃತ್ವ ವಹಿಸಿದ್ದರು.
Advertisement. Scroll to continue reading.
ನಗರದ ನೂರಾರು ಮಂದಿ ಆಗಮಿಸಿ ಬೆಳಕಿನ ಹಬ್ಬವನ್ನು ಸಂಭ್ರಮಿಸಿದರು.