ಹೆಬ್ರಿ : ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಬ್ರಿಯಲ್ಲಿ ಸೋಮವಾರ(ನ.20) ನಡೆದಿದೆ.
ಪೂಜಿತಾ(17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.
ಪೂಜಿತಾ ಹೆಬ್ರಿ ಎಸ್.ಆರ್. ಕಾಲೇಜ್‌ನಲ್ಲಿ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು ಸರಿಯಾಗಿ ಕಾಲೇಜ್ ಗೆ ಹೋಗುತ್ತಿರಲಿಲ್ಲ ಎನ್ನಲಾಗಿದೆ.
Advertisement. Scroll to continue reading.
ಯಾವುದೀ ವಿಚಾರದಲ್ಲಿ ಮನನೊಂದು ಹೆಬ್ರಿ ಕಿನ್ನಿಗುಡ್ಡೆ ಎಸ್.ಆರ್ ಕಾಲೇಜ್ ಬಳಿ ನಿರ್ಮಾಣ ಹಂತದಲ್ಲಿರುವ ಅವರ ಮನೆಯ ಕೋಣೆಯೊಂದರಲ್ಲಿ ಮೇಲಿನ ಕಬ್ಬಿಣದ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.