ಅಂಡರ್-19 ಏಷ್ಯಾಕಪ್ ಟೂರ್ನಿಗೆ 15 ಸದಸ್ಯರ ಭಾರತ ತಂಡವನ್ನು BCCI ಪ್ರಕಟಿಸಿದೆ. ಉದಯ್ ಸಹರಾನ್ ಅವರಿಗೆ ತಂಡದ ನಾಯಕತ್ವ ವಹಿಸಲಾಗಿದೆ. ಪಂದ್ಯಾವಳಿಯನ್ನು ದುಬೈ ಆಯೋಜಿಸಲಿದ್ದು, ಟೂರ್ನಿಯು ಡಿಸೆಂಬರ್ 8 ರಂದು ಪ್ರಾರಂಭವಾಗಲಿದೆ.
ಫೈನಲ್ ಪಂದ್ಯ ಡಿಸೆಂಬರ್ 17 ರಂದು ನಡೆಯಲಿದೆ.
19 ವರ್ಷದೊಳಗಿನವರ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಹಾಲಿ ಚಾಂಪಿಯನ್ ಆಗಿದೆ. ಅಂಡರ್-19 ಭಾರತ ತಂಡವು ಅತಿ ಹೆಚ್ಚು 8 ಟ್ರೋಫಿಗಳನ್ನು ಗೆದ್ದಿದೆ. ಈ ತಂಡದಲ್ಲಿ ಕರ್ನಾಟಕದ ವೇಗದ ಬೌಲರ್ ಧನುಷ್ ಗೌಡ ಸ್ಥಾನ ಪಡೆದುಕೊಂಡಿದ್ದಾರೆ.
Advertisement. Scroll to continue reading.
ಹೀಗಿದೆ ತಂಡ :
ಉದಯ್ ಸಹರಾನ್ (ನಾಯಕ), ಅಕ್ಷರ್ ಪಟೇಲ್, ಆದರ್ಶ್ ಸಿಂಗ್, ರುದ್ರ ಪಟೇಲ್, ಸಚಿನ್, ಪ್ರಿಯಾಂಶು ಮೊಲಿಯಾ, ಮುಶೀರ್ ಖಾನ್, ಅರ್ವೆಲ್ಲಿ ಅವ್ನೀಶ್ ರಾವ್, ಸೌಮ್ಯ ಕುಮಾರ್, ಮುರುಗನ್ ಅಭಿಷೇಕ್, ಇನ್ನೇಶ್ ಮಹಾಜನ್, ಧನುಷ್ ಗೌಡ, ಆರಾಧ್ಯ ಶುಕ್ಲಾ, ನಮಮ್ ತಿವಾರಿ, ರಾಜ್ ಲಿಂಬಾನಿ.
Advertisement. Scroll to continue reading.