ಮೈಸೂರು : ಸಂಖ್ಯಾ ಶಾಸ್ತ್ರವನ್ನು ಸಿನಿ ತಾರೆಯರು, ರಾಜಕೀಯ ವ್ಯಕ್ತಿಗಳು ನಂಬುತ್ತಾರೆ. ಹಲವು ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ. ಕೆಲವರು ತಮ್ಮ ಹೆಸರನ್ನು ಬದಲಿಸಿಕೊಳ್ಳುತ್ತಾರೆ.
ಮಾಜಿ ಸಿಎಂ ಯಡಿಯೂರಪ್ಪ ಸಹ ತಮ್ಮ ಹೆಸರಿನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದರು. Yeddyurappa ಎಂದು ಇದ್ದ ಹೆಸರನ್ನು Yediyurappa ಎಂದು ಬದಲಾಯಿಸಿಕೊಂಡಿದ್ದರು. ಹಾಗೇ ಎಂಎಲ್ಸಿ ಹೆಚ್ ವಿಶ್ವನಾಥ್ ಕೂಡ ತಮ್ಮ ಹೆಸರಿನ ಹಿಂದೆ ಅಡಗೂರು ಎಂದು ಸೇರಿಸಿಕೊಂಡಿದ್ದರು. ಅಲ್ಲದೇ ತಮಿಳುನಾಡು ಮಾಜಿ ಸಿಎಂ ಮುಖ್ಯಮಂತ್ರಿ ಜೆ. ಜಯಲಲಿತಾ ಸೇರಿದಂತೆ ಕೆಲವು ರಾಜಕಾರಣಿಗಳು ಹೆಸರು ಬದಲಿಸಿಕೊಂಡ ಉದಾಹರಣೆ ಇದೆ.
ಇದೀಗ ಮೈಸೂರು- ಕೊಡಗು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಅವರು ಕೂಡ ಹೆಸರು ಬದಲಿಸಿಕೊಂಡಿದ್ದಾರೆ.
Advertisement. Scroll to continue reading.
ಸಂಖ್ಯಾಶಾಸ್ತ್ರ ಪ್ರಕಾರ ಇಂಗ್ಲಿಷ್ ಹೆಸರು ಬರೆಯುವಲ್ಲಿ ಅವರು ಸಣ್ಣ ಬದಲಾವಣೆ ಮಾಡಿಕೊಂಡಿದ್ದಾರೆ. Prathap simha ಎಂಬ ಹೆಸರನ್ನು ಅವರು Pratap Simmha ಎಂದು ಬದಲಿಸಿಕೊಂಡಿದ್ದಾರೆ. ಈ ಬಗ್ಗೆ ಅವರು ಅಫಿಡೆವಿಟ್ ಮೂಲಕ ಘೋಷಿಸಿಕೊಂಡಿದ್ದಾರೆ.