ಕ್ರೀಡೆ

IND-AUS T-20: ಹೈಸ್ಕೋರಿಂಗ್ ಕದನದಲ್ಲಿ ಭಾರತಕ್ಕೆ 44 ರನ್ ಜಯ

1

ತಿರುವನಂತಪುರ: ಅಧಿಕಾರಯುತ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಪ್ರವಾಸಿ ಆಸ್ಟ್ರೇಲಿಯಾ ತಂಡವನ್ನು 2ನೇ ಟಿ20-ಐ ಪಂದ್ಯದಲ್ಲಿ 44 ರನ್‌ಗಳಿಂದ ಮಣಿಸಿ ಐದು ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಮುನ್ನಡೆ ಗಳಿಸಿದೆ.

ಹೈ ಸ್ಕೋರಿಂಗ್‌ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿ ದಾಖಲೆಯ 235/4 ರನ್‌ಗಳ ಬೃಹತ್ ಮೊತ್ತ ದಾಖಲಿಸಿದ ಭಾರತ ತಂಡ, ಬಳಿಕ ಚೇಸಿಂಗ್‌ ಶುರು ಮಾಡಿದ ಆಸ್ಟ್ರೇಲಿಯಾ ತಂಡವನ್ನು 191/9 ರನ್‌ಗಳಿಗೆ ನಿಯಂತ್ರಿಸಿತು.

ಟಾಸ್ ಗೆದ್ದು ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಲು ಅವಕಾಶ ನೀಡಿತು. ಇದನ್ನು ಸದ್ಬಳಕೆ ಮಾಡಿಕೊಂಡ ಭಾರತ ತಂಡದ ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್, 53, ಋತುರಾಜ್ ಗಾಯಕ್ವಾಡ್ 58, ಇಶಾನ್ ಕಿಶಾನ್ 52 ರನ್ ಗಳಿಸುವ ಮೂಲಕ ಭಾರತ ಉತ್ತಮ ರನ್ ಗಳಿಸುವಲ್ಲಿ ನೆರವಾದರು. ನಂತರ ಬಂದ ನಾಯಕ ಸೂರ್ಯಕುಮಾರ್ ಯಾದವ್ 19, ರಿಂಕು ಸಿಂಗ್ ಅಜೇಯ 31 ಹಾಗೂ ತಿಲಕ್ ವರ್ಮಾ ಅಜೇಯ 7 ರನ್ ಗಳಿಸಿದರು.

Advertisement. Scroll to continue reading.

ಭಾರತ ನೀಡಿದ 236 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಆಸ್ಟ್ರೇಲಿಯಾ ತಂಡಕ್ಕೆ ಭಾರತೀಯ ಬೌಲರ್ ಗಳು ಆರಂಭದಲ್ಲಿಯೇ ಮುಳುವಾದರು. ಸ್ವಿಟ್ ಸ್ಮಿತ್ ಹಾಗೂ ಮ್ಯಾಥ್ಯೂ ಸಾರ್ಟ್ ತಲಾ 19 ರನ್ ಗಳಿಸಿದಾಗ ಕ್ರಮವಾಗಿ ಪ್ರಸಿದ್ಧ್ ಕೃಷ್ಣ ಹಾಗೂ ರವಿ ಬಿಷ್ಣೋಯಿ ಅವರ ಬೌಲಿಂಗ್ ನಲ್ಲಿ ಔಟಾದರು. ನಂತರ ಜೋಶ್ ಇಂಗ್ಲಿಷ್ ಅವರನ್ನು ರವಿ ಬಿಷ್ಣೋಯಿ ಫೆವಿಲಿಯನ್ ಗೆ ಅಟ್ಟಿದರು.

ಗ್ಲೇನ್ ಮ್ಯಾಕ್ಸ್ ವೆಲ್ ಕೇವಲ 12 ರನ್ ಗಳಿಸಿ ಅಕ್ಸರ್ ಪಟೇಲ್ ಬೌಲಿಂಗ್ ನಲ್ಲಿ ಔಟಾದರು. ಮಾರ್ಕಸ್ ಸ್ಟೋಯಿಸ್ 45 ರನ್ ಗಳಿಸಿದಾಗ ಮುಕೇಶ್ ಕುಮಾರ್ ಬೌಲಿಂಗ್ ನಲ್ಲಿ ಅಕ್ಸರ್ ಪಟೇಲ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ರವಿ ಬಿಷ್ಣೋಯಿ ಟಿಮ್ ಡೇವಿಡ್ ಅವರ ವಿಕೆಟ್ ಪಡೆದರು. ಮ್ಯಾಥ್ಯೂ ವಾಡೆ ಅಜೇಯ 42 ರನ್ ಗಳಿಸಿದರು. ಹೀಗಾಗಿ ಆಸ್ಟ್ರೇಲಿಯಾ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಿಂದ 44 ರನ್ ಗಳಿಂದ ಭಾರತ ಜಯಭೇರಿ ಬಾರಿಸಿತು.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com