ಸಿನಿಮಾ

ಬಿಗ್ ಬಾಸ್ ಸೀಸನ್ 10: ಕಿಸ್ ಕೊಟ್ಟು ನಾಚಿಕೆ ಆಗೋಯ್ತು ಎಂದ ನಮ್ರತಾ ಗೌಡ

1

ಬಿಗ್ ಬಾಸ್ ಸೀಸನ್ 10ನಲ್ಲಿಜಗಳ, ಪರಸ್ಪರ ಕಿತ್ತಾಟ ಕಂಡುಬರುತ್ತಿದೆ. ಈ ಬಾರಿ ವಿನಯ್ ಹಾಗೂ ಸ್ನೇಹಿತ್ ಸಂಗಡ ಬಿಟ್ಟು ನಮ್ರತಾ ಗೌಡ ಡ್ರೋನ್ ಪ್ರತಾಪ್ ತಂಡ ಸೇರಿದ್ದರು. ಆದರೆ, ಕ್ಯಾಪ್ಟನ್ ಟಾಸ್ಕ್‍ನಲ್ಲಿ ನಮ್ರತಾರನ್ನು ಡ್ರೋನ್ ಎಲಿಮಿನೇಟ್ ಮಾಡಿದ್ದಾರೆ.
ಹೀಗಾಗಿ ಬಿಗ್ ಬಾಸ್ ಮನೆಯಲ್ಲಿ ಉಳಿಯಬೇಕಾದರೆ ಬಚಾವ್ ಆಗಲೇಬೇಕಾದ ಅನಿವಾರ್ಯತೆ ಬಂದೊದಗಿದೆ. ಈ ನಡುವೆ ನಮ್ರತಾ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಕಿಸ್ ಕೊಟ್ಟಿದ್ದಾರೆ.

ಬಿಗ್ ಬಾಸ್‍ನಲ್ಲಿ ಈ ವಾರ ನಮ್ರತಾ ಗೌಡ ಅವರು ಕ್ಯಾಪ್ಟನ್ಸಿ ಟಾಸ್ಕ್‍ನಿಂದ ಹೊರಗೆ ಇರಬೇಕು ಎನ್ನುವ ನಿರ್ಧಾರವನ್ನು ಡ್ರೋನ್ ಪ್ರತಾಪ್ ಘೋಷಿಸಿದರು. ಇದಾದ ಬಳಿಕ ನಮ್ರತಾ ಅತ್ತರು. ಪ್ರತಾಪ್ ಮೋಸ ಮಾಡಿದ್ದಾನೆ ಎಂದರು.

ಮರುದಿನ ನಮ್ರತಾ ಗೌಡ ಮೂಡ್ ಸರಿಯಾಗಿದ್ದು, ಎಲ್ಲರೊಂದಿಗೆ ಬೆರೆತಿದ್ದಾರೆ.

ಹಾಗೇ ನಮ್ರತಾ ಕ್ಯಾಮೆರಾ ಬಳಿ ಹೋದರು. ಆಗ ಕ್ಯಾಮೆರಾ ಹಿಂದೆ ತಿರುಗಿತ್ತು. ಇಲ್ಲಿ ನೋಡು. ನಾನು ಇನ್ನು ಅಳೋದಿಲ್ಲ' ಎಂದು ನಮ್ರತಾ ಕ್ಯಾಮೆರಾಗೆ ಹೇಳಿದರು. ಆದರೆ, ಕ್ಯಾಮೆರಾ ಹಿಂದಿರುಗಲೇ ಇಲ್ಲ. ಆ ಬಳಿಕ ಕ್ಯಾಮೆರಾ ಹಿಂಭಾಗಕ್ಕೆ ಕಿಸ್ ಕೊಟ್ಟರು. ತಕ್ಷಣ ಕ್ಯಾಮೆರಾ ಹಿಂದಕ್ಕೆ ತಿರುಗಿತು.ಅಯ್ಯೋ ನನಗೆ ನಾಚಿಕೆ ಆಗೋಯ್ತು’ ಎಂದು ನಮ್ರತಾ ಓಡಿ ಹೋದರು. ಆ ಬಳಿಕ ಕ್ಯಾಮೆರಾ ಲೆನ್ಸ್‍ಗೂ ಕಿಸ್ ಕೊಟ್ಟರು.

Advertisement. Scroll to continue reading.

ಈ ವಾರ ನಮ್ರತಾ ಗೌಡ ಅವರು ಪ್ರತಾಪ್ ಟೀಂ ಸೇರಿದ್ದಾರೆ. ಅವರು ಉತ್ತಮವಾಗಿ ಆಟ ಆಡಬೇಕಾದ ಅನಿವಾರ್ಯತೆ ಇದೆ. ಈ ವಾರ ನಾಮಿನೇಟ್ ಆದವರ ಸಾಲಿನಲ್ಲಿ ನಮ್ರತಾ ಕೂಡ ಇದ್ದಾರೆ. ಸ್ನೇಹಿತ್ ಅಥವಾ ನಮ್ರತಾ ಈ ವಾರ ಎಲಿಮಿನೇಟ್ ಆಗಬಹುದು ಎನ್ನಲಾಗುತ್ತಿದೆ.

ಯಾರು ಉಳಿದುಕೊಳ್ಳುತ್ತಾರೆ, ಯಾರು ಔಟ್ ಆಗುತ್ತಾರೆ ಎನ್ನುವುದಕ್ಕೆ ವೀಕೆಂಡ್‍ವರೆಗೆ ಕಾಯಬೇಕು.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com