ಕಾಸರಗೋಡು : ಏಳು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ಹಾಗೂ ಆಕೆಯ ಇಬ್ಬರು ಸಹೋದರರಿಗೆ ಸಲಿಂಗರತಿ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಹೊಸದುರ್ಗ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿ ಸುರೇಶ್ ಕುಮಾರ್ ಅವರು ಪೋಕ್ಸೋ ಸೇರಿದಂತೆ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಒಟ್ಟು 189 ವರ್ಷಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಬಳಾಲ್ ಗ್ರಾಮ ಪಂಚಾಯಿತ್ ನ ಅರಿಂಜಾಲ್ ನಿವಾಸಿ ಸುಧೀಶ್ ಯಾನೆ ಪಪ್ಪು(25) ಎಂಬಾತನೇ ಶಿಕ್ಷೆಗೊಳಗಾದ ಅಪರಾಧಿ. ಲೈಂಗಿಕ ದೌರ್ಜನ್ಯ, ಅಪಹರಣ ಮತ್ತು ಬೆದರಿಕೆ ಸೇರಿದಂತೆ ಒಟ್ಟು 21 ಪ್ರಕರಣದಡಿ ಈ ಶಿಕ್ಷೆ ವಿಧಿಸಲಾಗಿದೆ.
ಎಲ್ಲ ಪ್ರಕರಣಗಳು ಏಕಕಾಲದಲ್ಲಿ ನಡೆದಿರುವುದರಿಂದ ಆರೋಪಿಯು ಒಟ್ಟಾರೆ 20 ವರ್ಷ ಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ಶಿಕ್ಷೆಯ ಹೊರತಾಗಿ ಆರೋಪಿಗೆ ಮೂರು ಪ್ರಕರಣಗಳಲ್ಲಿ 4.05 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದರೆ ಮತ್ತೆ 2 ವರ್ಷ ಹೆಚ್ಚುವರಿ ಸಜೆ ಅನುಭವಿಸಬೇಕು ಎಂದು ತೀರ್ಪಿನಲ್ಲಿ ಹೇಳಿದ್ದಾರೆ.
Advertisement. Scroll to continue reading.