ಸಿಡ್ನಿ : ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಾಗಿ ಆಗಮಿಸಿದ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಭಾರೀ ಮುಖಭಂಗವಾಗಿದೆ. ಪಾಕ್ ಆಟಗಾರರನ್ನು ಸ್ವಾಗತಿಸಲು ಮಾಡಲು ಯಾರೂ ಬಂದಿರಲಿಲ್ಲ. ಸ್ವತಃ ಪಾಕಿಸ್ತಾನ ರಾಯಭಾರ ಕಚೇರಿಯ ಅಧಿಕಾರಿಗಳು ಕೂಡ ಹಾಜರಿರಲಿಲ್ಲ. ಪಾಕಿಸ್ತಾನ ಆಟಗಾರರು ತಮ್ಮ ಲಗೇಜ್ಗಳನ್ನು ತಾವೇ ಟ್ರಕ್ನಲ್ಲಿ ತುಂಬಿಸಿ ಹೋಟೆಲ್ಗೆ ತೆರಳಬೇಕಾದ ಪರಿಸ್ಥಿತಿ ಒದಗಿಬಂತು. ಸದ್ಯ ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪಾಕಿಸ್ತಾನ ಆಟಗಾರರು ಲಾಹೋರ್ ವಿಮಾನ ನಿಲ್ದಾಣದಿಂದ ಹೊರಟು ಸಿಡ್ನಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಇಲ್ಲಿ ಪಾಕ್ ಆಟಗಾರರನ್ನು ಸ್ವಾಗತಿಸಲು ಅಥವಾ ಅವರನ್ನು ಕರೆದೊಯ್ಯಲು ಪಾಕಿಸ್ತಾನ ರಾಯಭಾರ ಕಚೇರಿ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾದ ಅಧಿಕಾರಿಗಳ ಪೈಕಿ ಯಾರೂ ಬಂದಿರಲಿಲ್ಲ. ಇದರಿಂದಾಗಿ ತಂಡದ ಸದಸ್ಯರು ತಮ್ಮ ಲಗೇಜ್ಗಳನ್ನು ತಾವೇ ತೆಗೆದುಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಯಿತು.
ವೈರಲ್ ವಿಡಿಯೋದಲ್ಲಿ, ಪಾಕಿಸ್ತಾನ ಕ್ರಿಕೆಟ್ ತಂಡದ ಹಿರಿಯ ಆಟಗಾರ ಮೊಹಮ್ಮದ್ ರಿಜ್ವಾನ್ ತನ್ನ ಸಹ ಆಟಗಾರರ ಕಿಟ್ ಬ್ಯಾಗ್ಗಳನ್ನು ಲೋಡ್ ಮಾಡಲು ಟ್ರಕ್ ಒಳಗಡೆ ನಿಂತಿರುವುದು ಕಾಣಬಹುದು. ಬಾಬರ್ ಅಜಂ ಮತ್ತು ಶಾಹೀನ್ ಅಫ್ರಿದಿ ಸೇರಿದಂತೆ ಆಟಗಾರರು ಲಗೇಜ್ಗಳನ್ನು ಟ್ರಕ್ನಲ್ಲಿ ತುಂಬಿಸುತ್ತಿದ್ದಾರೆ.
Advertisement. Scroll to continue reading.
ಪಾಕಿಸ್ತಾನ – ಆಸ್ಟ್ರೇಲಿಯಾ ಟೆಸ್ಟ್ ಸರಣಿಯು ಡಿಸೆಂಬರ್ 14 ರಿಂದ ಆರಂಭವಾಗಲಿದೆ.