ನವದೆಹಲಿ : ಭಾರತೀಯ ನೌಕಾಪಡೆಯ ಯುದ್ಧನೌಕೆಯನ್ನ ಮುನ್ನಡೆಸುವ ಭಾರತೀಯ ನೌಕಾಪಡೆಯ ಮೊದಲ ಮಹಿಳಾ ಅಧಿಕಾರಿಯಾಗಿ ಕಮಾಂಡರ್ ಪ್ರೇರಣಾ ಡಿಯೋಸ್ತಲಿ ಅವರು ನೇಮಕಗೊಂಡಿದ್ದಾರೆ.
ಭಾರತೀಯ ನೌಕಾಪಡೆಯ ಪಶ್ಚಿಮ ನೌಕಾಪಡೆ, “ಕಮಾಂಡರ್ ಪ್ರೇರಣಾ ಡಿಯೋಸ್ತಾನಿ ಅವರು ಭಾರತೀಯ ನೌಕಾಪಡೆಯ ಯುದ್ಧನೌಕೆಯನ್ನ ಮುನ್ನಡೆಸುವ ಭಾರತೀಯ ನೌಕಾಪಡೆಯ ಮೊದಲ ಮಹಿಳಾ ಅಧಿಕಾರಿಯಾಗಲಿದ್ದಾರೆ.
ಮಹಿಳಾ ಅಧಿಕಾರಿ ಪ್ರಸ್ತುತ ಯುದ್ಧನೌಕೆ ಐಎನ್‌ಎಸ್ ಚೆನ್ನೈನ ಮೊದಲ ಲೆಫ್ಟಿನೆಂಟ್ ಆಗಿದ್ದಾರೆ. ವಾಟರ್ಜೆಟ್ ಎಫ್‌ಎಸಿ ಐಎನ್‌ಎಸ್ ಟ್ರಿಂಕಟ್‌ನ ಕಮಾಂಡಿಂಗ್ ಆಫೀಸರ್ ಆಗಿ ಆಯ್ಕೆಯಾದ ನಂತರ ವೆಸ್ಟರ್ನ್ ಫ್ಲೀಟ್ ಕಮಾಂಡರ್ ರಿಯರ್ ಅಡ್ಮಿರಲ್ ಪ್ರವೀಣ್ ನಾಯರ್ ಅವರು ನೇಮಕಾತಿ ಪತ್ರವನ್ನು ನೀಡಿದರು ಎಂದು ಮಾಹಿತಿ ನೀಡಿದೆ.
Advertisement. Scroll to continue reading.