ರಾಷ್ಟ್ರೀಯ

ಆದಿತ್ಯ ಎಲ್ 1 : ಸೋಲಾರ್ ವಿಂಡ್ ಪಾರ್ಟಿಕಲ್ ಎಕ್ಸ್‌ಪೆರಿಮೆಂಟ್ ಪೇಲೋಡ್ ಕಾರ್ಯಾಚರಣೆ ಆರಂಭ : ಇಸ್ರೋ

2

ಬೆಂಗಳೂರು : ಸೂರ್ಯನ ಅಧ್ಯಯನಕ್ಕಾಗಿ ಇಸ್ರೋ ಕಳುಹಿಸಿರುವ ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆಯ ಎರಡನೇ ಉಪಕರಣ ಚಾಲನೆಗೊಂಡಿದೆ.

ಇಸ್ರೋ ಕಮಾಂಡಿಂಗ್ ಕೇಂದ್ರದಿಂದ ಅದಿತ್ಯ ಎಲ್-1 ನೌಕೆಯ ಎರಡನೇ ಉಪಕರಣ ಸೋಲಾರ್‌ ವಿಂಡ್ ಐಯಾನ್ ಸ್ಪೆಕ್ಟೋಮೀಟರ್ (SWIS) ಅನ್ನು ಚಾಲನೆಗೊಳಿಸಲಾಗಿದೆ ಮತ್ತು ಅದರ ಕಾರ್ಯ ಸಾಮಾನ್ಯವಾಗಿದೆ ಎಂದು ಇಸ್ರೋ X ನಲ್ಲಿ ತಿಳಿಸಿದೆ.

ಈ SWIS ಉಪಕರಣ ಆದಿತ್ಯ ಎಲ್1 ನೌಕೆಯ ಸೋಲಾ‌ ವಿಂಡ್ ಪಾರ್ಟಿಕಲ್ ಎಕ್ಸ್‌ಪರಿಮೆಂಟ್‌ (ASPEX) ಭಾಗವಾಗಿದ್ದು, ಕಳೆದ 2 ದಿನಗಳಲ್ಲಿ SWIS ನಿಂದ ಕಂಡುಕೊಳ್ಳಲಾದ ಮಾಹಿತಿ ಪ್ರಕಾರ, ಸೂರ್ಯನ ಹೊರಭಾಗದ ಪ್ರೋಟಾನ್ ಮತ್ತು ಆಲ್ಫಾ ಕಣಗಳ ಶಕ್ತಿಯ ವ್ಯತ್ಯಾಸಗಳನ್ನು ಗುರುತಿಸಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

Advertisement. Scroll to continue reading.

ಸೆಪ್ಟೆಂಬರ್ 2ರಂದು ಶ್ರೀಹರಿಕೋಟದ ಇಸ್ರೋ ಉಡಾವಣಾ ಕೇಂದ್ರದಿಂದ ‘ಆದಿತ್ಯ-ಎಲ್ 1’ ಬಾಹ್ಯಾಕಾಶ ನೌಕೆ ಹೊತ್ತ ಪಿಎಸ್‌ಎಲ್‌ವಿ-ಸಿ 57 ರಾಕೆಟ್ ಉಡ್ಡಯನ ಮಾಡಲಾಗಿತು.

ಆದಿತ್ಯ ಎಲ್ 1 ಅನ್ನು ಸಂಪೂರ್ಣ ದೇಶೀಯವಾಗಿ ನಿರ್ಮಿಸಲಾಗಿದ್ದು, ಒಟ್ಟು ಏಳು ಉಪಕರಣಗಳು ಇವೆ. ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿರುವ ಲಗ್ರಾಂಜಿಯನ್ ಬಿಂದುವಿನಲ್ಲಿ ಆದಿತ್ಯ ಎಲ್-1 ಅಂತರಿಕ್ಷ ವೀಕ್ಷಣಾಲಯವನ್ನು ಇರಿಸಲಾಗುತ್ತದೆ. ಇದು ಯಾವುದೇ ಅಡಚಣೆ ಇಲ್ಲದೆ ನಿರಂತರವಾಗಿ ಸೂರ್ಯನಲ್ಲಿ ನಡೆಯುವ ಸೌರ ಚಟುವಟಿಕೆಗಳನ್ನು ಗಮನಿಸುತ್ತದೆ.

ನಾಲ್ಕು ಪ್ರತ್ಯೇಕ ಉಪಕರಣಗಳಿಂದ ಸೂರ್ಯನ ಪ್ರಭಾಗೋಳ, ವರ್ಣಗೋಳ ಮತ್ತು ಕಿರೀಟದ ಅಧ್ಯಯನವನ್ನು ನಿರಂತರವಾಗಿ ನಡೆಸಲಿದೆ. ಉಳಿದ ಮೂರು ಉಪಕರಣಗಳು ಅಯಸ್ಕಾಂತ ಕ್ಷೇತ್ರ ಮತ್ತು ಕಣ ಪ್ರವಾಹದ ವೀಕ್ಷಣೆ ನಡೆಸಲಿವೆ.

Advertisement. Scroll to continue reading.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com