ಚೆನ್ನೈ ಪ್ರವಾಹದಲ್ಲಿ ಸಿಲುಕಿದ್ದ ನಟ ಅಮೀರ್ ಖಾನ್! ರಕ್ಷಿಸುವ ಫೋಟೋ ವೈರಲ್
Published
0
ಚೆನ್ನೈ : ಮೈಚಾಂಗ್ ಚಂಡಮಾರುತದಿಂದಾಗಿ ಚೆನ್ನೈ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಹಾನಿಯಾಗಿದೆ. ನಗರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇದೀಗ ಕರಪಾಕ್ಕಂನಲ್ಲಿ ಸಿಲುಕಿದ್ದ ನಟ ವಿಷ್ಣು ವಿಶಾಲ್ ಅವರನ್ನು ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ರಕ್ಷಿಸಿದೆ. ಆದರೆ, ಇಲ್ಲಿ ಕುತೂಹಲ ಹುಟ್ಟು ಹಾಕಿದ್ದ ವಿಷಯವೆಂದರೆ, ವಿಷ್ಣು ವಿಶಾಲ್ ಅವರನ್ನು ರಕ್ಷಿಸುವ ಸಮಯದಲ್ಲಿ ಆಮೀರ್ ಖಾನ್ ಕೂಡ ಚಂಡಮಾರುತದ ಸುಳಿಗೆ ಸಿಲುಕಿದ್ದರು ಎನ್ನುವ ವಿಷಯ!
ಹೌದು ವಿಷ್ಣು ವಿಶಾಲ್ ಅವರು ತಮ್ಮ ರಕ್ಷಣಾ ಕಾರ್ಯಾಚರಣೆಯ ಫೋಟೋ ಶೇರ್ ಮಾಡಿಕೊಂಡಿದ್ದು, ಅದರಲ್ಲಿ ನಟ ಅಮೀರ್ ಖಾನ್ ಸಹ ಇದ್ದ ವಿಚಾರ ಬೆಳಕಿಗೆ ಬಂದಿದೆ.
ಮೈಚಾಂಗ್ ಚಂಡಮಾರುತದಿಂದ ಉಂಟಾದ ಚೆನ್ನೈ ಪ್ರವಾಹದಿಂದ ತಮ್ಮನ್ನು ರಕ್ಷಿಸಲಾಗಿದೆ ಎಂದು ವಿಷ್ಣು ವಿಶಾಲ್ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗಪಡಿಸಿದ್ದಾರೆ.
ಪ್ರಯಾಣಿಕರನ್ನು ರಕ್ಷಿಸಲು ದೋಣಿಗಳನ್ನು ನಿಯೋಜಿಸಿದ ಎರಡು ಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ. ಚಿತ್ರಗಳಲ್ಲಿ ಅಮೀರ್ ಖಾನ್ ಅವರನ್ನೂ ಕಾಣಬಹುದು. ವಿಷ್ಣು ವಿಶಾಲ್ ಅವರ ಪತ್ನಿ, ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಅವರನ್ನೂ ಗುರುತಿಸಬಹುದು.
ಚಿತ್ರಗಳನ್ನು ಹಂಚಿಕೊಂಡ ವಿಶಾಲ್, ‘ನಮ್ಮಂತಹ ಸಿಕ್ಕಿಬಿದ್ದಿರುವ ಜನರಿಗೆ ಸಹಾಯ ಮಾಡಿದ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆಗೆ ಧನ್ಯವಾದಗಳು. ಕರಪಾಕ್ಕಂನಲ್ಲಿ ರಕ್ಷಣಾ ಕಾರ್ಯಾಚರಣೆಗಳು ಪ್ರಾರಂಭವಾಗಿವೆ. ಈಗಾಗಲೇ 3 ಬೋಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಇಂತಹ ಪರೀಕ್ಷೆಯ ಸಮಯದಲ್ಲಿ ಟಿಎನ್ ಸರ್ಕಾರವು ಉತ್ತಮ ಕೆಲಸ ಮಾಡಿದೆ. ಧನ್ಯವಾದಗಳು ಪಟ್ಟುಬಿಡದೆ ಕೆಲಸ ಮಾಡುತ್ತಿರುವ ಎಲ್ಲಾ ರಕ್ಷಣಾದಳಕ್ಕೆ ಎಂದು ಹೇಳಿದ್ದಾರೆ.
Advertisement. Scroll to continue reading.
ತಾನು ಕರಪಕ್ಕಂನಲ್ಲಿ ಸಿಕ್ಕಿಬಿದ್ದಿದ್ದೇನೆ ಎಂದು ವಿಶಾಲ್ ಈ ಹಿಂದೆ ಬಹಿರಂಗಪಡಿಸಿದ್ದರು. ನನ್ನ ಮನೆಗೆ ನೀರು ನುಗ್ಗುತ್ತಿದೆ ಮತ್ತು ಕರಪಾಕ್ಕಂನಲ್ಲಿ ನೀರಿನ ಮಟ್ಟವು ಕೆಟ್ಟದಾಗಿ ಏರುತ್ತಿದೆ, ನಾನು ಸಹಾಯಕ್ಕಾಗಿ ಕರೆ ಮಾಡಿದ್ದೇನೆ. ಕರೆಂಟ್ ಇಲ್ಲ, ವೈಫೈ ಇಲ್ಲ, ಫೋನ್ ಸಿಗ್ನಲ್ ಇಲ್ಲ, ಏನೂ ಇಲ್ಲ. ನಿರ್ದಿಷ್ಟ ಹಂತದಲ್ಲಿ ಟೆರೇಸ್‌ನಲ್ಲಿ ಮಾತ್ರ ಸ್ವಲ್ಪ ಸಿಗ್ನಲ್ ಸಿಗುತ್ತಿದೆ. ನಾನು ಮತ್ತು ಇಲ್ಲಿರುವ ಅನೇಕರು ಚೆನ್ನೈನಾದ್ಯಂತ ಇರುವ ಜನರು ಸಹಾಯಕ್ಕಾಗಿ ಕೋರಿಕೊಂಡಿದ್ದಾರೆ ಎಂದು ಹೇಳಿದ್ದರು. ಬಳಿಕ ಅವರನ್ನು ರಕ್ಷಿಸಲಾಗಿದೆ.
ಇನ್ನು ಅನಾರೋಗ್ಯಕ್ಕೆ ತುತ್ತಾಗಿರುವ ತಾಯಿಯ ಚಿಕಿತ್ಸೆಗಾಗಿ ನಟ ಆಮೀರ್ ಖಾನ್ ಕೆಲ ದಿನಗಳಿಂದ ಚೆನ್ನೈನಲ್ಲಿ ಬೀಡುಬಿಟ್ಟಿದ್ದಾರೆ. ಚೆನ್ನೈನ ಕರಪಾಕ್ಕಂ ಪ್ರದೇಶದಲ್ಲಿ ವಿಷ್ಣು ವಿಶಾಲ್ ಪತ್ನಿ ಜ್ವಾಲಾ ಗುಟ್ಟಾ ಜೊತೆ ನೆಲೆಸಿದ್ದಾರೆ. ಅವರ ಮನೆಯಲ್ಲೇ ಆಮೀರ್ ಖಾನ್ ಕೂಡ ಇದ್ದರು ಎನ್ನಲಾಗುತ್ತಿದೆ.
ಇದೇ ವೇಳೆ, ತಮಿಳುನಾಡು ಕೈಗಾರಿಕೆಗಳ ಸಚಿವ ಡಾ. ಟಿಆರ್‌ಬಿ ರಾಜಾ ಅವರು ಎಕ್ಸ್ ಖಾತೆಯಲ್ಲಿ ನಟ ಆಮೀರ್ ಖಾನ್ ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ತಾಳ್ಮೆಯಿಂದಿದ್ದಕ್ಕಾಗಿ ಪ್ರಶಂಸಿಸಿದ್ದಾರೆ.