ಮಂಗಳೂರು : ಏಣಿಗೆ ವಿದ್ಯುತ್ ಪ್ರವಹಿಸಿ ಪೈಂಟರ್ ಮೃತಪಟ್ಟ ಘಟನೆ ಅಳಪೆ ಗ್ರಾಮದ ಶಿಲ್ಪ ಪಡ್ಪುವಿನಲ್ಲಿ ನಡೆದಿದೆ.
ಬಂಟ್ವಾಳ ಫರಂಗಿಪೇಟೆ ಅರ್ಕುಳ ನಿವಾಸಿ ಜೈನುದ್ದೀನ್ ಅಬ್ದುಲ್ ರೆಹಮಾನ್ (47) ಮೃತಪಟ್ಟವರು.
ಜೈನುದ್ದೀನ್ ಡಿ. 4 ರಂದು ಹೆನ್ರಿ ಡಿ’ಸೋಜಾ ಅವರ ಮಾಲಕತ್ವದ ಮನೆಯಲ್ಲಿ ಮೇಲ್ಚಾವಣಿ ಬಳಿ ಕಬ್ಬಿಣದ ಏಣಿ ಮೇಲೆ ನಿಂತು ಪೈಂಟಿಂಗ್ ಮಾಡುತ್ತಿದ್ದಾಗ ಪಕ್ಕದಲ್ಲಿದ್ದ ಹೈಟೆನ್ಶನ್ ವೈರ್ ತಾಗಿದೆ. ಪರಿಣಾಮ ವಿದ್ಯುತ್ ಪ್ರವಹಿಸಿ ಕೆಳಗೆ ಕುಸಿದು ಬಿದ್ದಿದ್ದಾರೆ.
Advertisement. Scroll to continue reading.
ಅವರ ಜತೆ ಕೆಲಸ ಮಾಡುತ್ತಿದ್ದ ಇಬ್ಬರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರೆಹಮಾನ್ ಅವರು ಡಿ. 5ರಂದು ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.