ಸಿನಿಮಾ

ಖ್ಯಾತ ಹಾಲಿವುಡ್ ನಟ ರಿಯಾನ್ ಒ ನೀಲ್ ಇನ್ನಿಲ್ಲ

0

ನ್ಯೂಯಾರ್ಕ್ : ಖ್ಯಾತ ಹಾಲಿವುಡ್ ನಟ ರಿಯಾನ್ ಒ ನೀಲ್ ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. 70ರ ದಶಕದ ಹಾಲಿವುಡ್ ಹಾರ್ಟ್ ಥ್ರೋಬ್ ಎಂದೇ ಖ್ಯಾತರಾಗಿರುವ ರಯಾನ್ ಲವ್ ಸ್ಟೋರಿ, ವಾಟ್ಸ್ ಆಪ್, ಡಾಕ್ಟರ್, ಪೇಪರ್ ಮೂನ್ ಚಿತ್ರಗಳಿಂದ ಖ್ಯಾತರಾಗಿದ್ದರು.

ದಿ ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಅವರ ಮಗ ಪ್ಯಾಟ್ರಿಕ್ ಓ’ನೀಲ್ ತನ್ನ ತಂದೆಯ ಮರಣವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ, ಪೋಸ್ಟ್‌ನಲ್ಲಿ ಸಾವಿನ ಕಾರಣವನ್ನು ಉಲ್ಲೇಖಿಸಿಲ್ಲ ಅಥವಾ ಅವರು ಎಲ್ಲಿ ಸಾವನ್ನಪ್ಪಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದರು ಎಂದು ಮೂಲಗಳು ತಿಳಿಸಿವೆ.

Advertisement. Scroll to continue reading.

1941ರಲ್ಲಿ ಲಾಸ್‌ ಏಂಜಲೀಸ್‌ನಲ್ಲಿ ಜನಿಸಿದ ರಿಯಾನ್‌ ಒ ನಿಲ್‌ ಆರಂಭದಲ್ಲಿ ಬಾಕ್ಸರ್‌ ಆಗಿದ್ದರು. 1960ರಲ್ಲಿ ಅವರು ನಟನಾ ಕ್ಷೇತ್ರಕ್ಕೆ ಕಾಲಿಟ್ಟರು. ‘ದಿ ಮೆನಿ ಲವ್ಸ್‌ ಆಫ್‌ ಡೋಬಿ ಗಿಲ್ಲಿಸ್‌’ ಎನ್ನುವ ಟಿವಿ ಶೋ ಮೂಲಕ ರಿಯಾನ್‌ ಒ ನಿಲ್‌ ಬಣ್ಣದ ಪ್ರಪಂಚ ಪ್ರವೇಶಿಸಿದರು. 1969ರಲ್ಲಿ ತೆರೆಕಂಡ ʼದಿ ಬಿಗ್‌ ಬೌನ್ಸ್‌ʼ ರಿಯಾನ್‌ ಒ ನಿಲ್‌ ಅಭಿನಯಿಸಿದ ಮೊದಲ ಚಿತ್ರ.

1964ರ ಎಬಿಸಿ ಪ್ರೈಮ್‌ ಟೈಮ್‌ ಟೆಲಿವಿಷನ್‌ ಧಾರಾವಾಹಿ ʼಪೇಟನ್‌ ಪ್ಲೇಸ್‌ʼನಲ್ಲಿ ರಾಡ್ನಿ ಹ್ಯಾರಿಂಗ್ಟನ್‌ ಪಾತ್ರವನ್ನು ನಿರ್ವಹಿಸುವ ಮೂಲಕ ಜನಪ್ರಿಯರಾದರು. ಇನ್ನು 1970ರಲ್ಲಿ ತೆರೆಕಂಡ ರೊಮ್ಯಾಂಟಿಕ್‌ ಡ್ರಾಮಾ ʼಲವ್‌ ಸ್ಟೋರಿʼ ಚಿತ್ರದ ಮೂಲಕ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾದರು. ಎರಿಕ್‌ ಸೆಗಲ್‌ ಅವರ ಅದೇ ಶೀರ್ಷಿಕೆಯ ಕಾದಂಬರಿ ಆಧಾರಿತ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಸಕತ್ ಸೌಂಡ್ ಮಾಡಿತ್ತು.

2015ರಲ್ಲಿ ಬಿಡುಗಡೆಯಾದ ʼಯೂನಿಟ್‌ʼ ಮತ್ತು ʼನೈಟ್‌ ಆಫ್‌ ಕಪ್ಸ್‌ʼ ರಿಯಾನ್‌ ಒ ನಿಲ್‌ ಅಭಿನಯಿಸಿದ ಕೊನೆಯ ಚಿತ್ರಗಳು. ರಿಯಾನ್‌ ಒ ನಿಲ್‌ ಆಸ್ಕರ್‌ ಪ್ರಶಸ್ತಿಗಾಗಿ ನಾಮ ನಿರ್ದೇಶನಗೊಂಡಿದ್ದರು. ಅವರು ನಾಲ್ವರು ಮಕ್ಕಳನ್ನು ಅಗಲಿದ್ದಾರೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com