ನವದೆಹಲಿ : ಹಿಂದುಗಳ ಬಹುವರ್ಷಗಳ ಕನಸು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಜನವರಿ 22 ರಂದು ಶ್ರೀರಾಮ ದೇವರ ಪ್ರತಿಷ್ಠಾಪನಾ ಸಮಾರಂಭ ನಡೆಯಲಿದೆ. ಈ ಕ್ಷಣಕ್ಕಾಗಿ ರಾಮ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ.
ಈ ಬಹು ನಿರೀಕ್ಷಿತ ಕಾರ್ಯಕ್ರಮದ ಬಗ್ಗೆ ಮತ್ತೊಂದು ಸಿಹಿ ಸುದ್ದಿ ಲಭಿಸಿದೆ. ಶನಿವಾರ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಶನಿವಾರ ದೇವಾಲಯದ ಗರ್ಭಗುಡಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
“ಭಗವಾನ್ ಶ್ರೀ ರಾಮ್ಲಾಲಾ ಅವರ ಗರ್ಭಗುಡಿ ಬಹುತೇಕ ಸಿದ್ಧವಾಗಿದೆ. ಇತ್ತೀಚೆಗೆ ಲೈಟಿಂಗ್-ಫಿಟ್ಟಿಂಗ್ ಕೆಲಸವೂ ಪೂರ್ಣಗೊಂಡಿದೆ. ನಿಮ್ಮೊಂದಿಗೆ ಕೆಲವು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
Advertisement. Scroll to continue reading.
ಇದಕ್ಕೂ ಮುನ್ನ ಶುಕ್ರವಾರ, ಟ್ರಸ್ಟ್ ರಾಮ ಜನ್ಮಭೂಮಿ ದೇವಾಲಯದ ಪ್ರಸ್ತುತ ಸ್ಥಿತಿಯನ್ನು ತೋರಿಸುವ ಫೋಟೋಗಳನ್ನು ಹಂಚಿಕೊಂಡಿದೆ.
ಟ್ರಸ್ಟ್ ಮೇಲ್ವಿಚಾರಣೆಯಲ್ಲಿ ದೇವಾಲಯದ ನಿರ್ಮಾಣವು ವೇಗವಾಗಿ ನಡೆಯುತ್ತಿದೆ.