ಕ್ರೀಡೆ

WATCH : ಕೈಯಿಂದ ಬಾಲ್ ತಡೆದು ಔಟ್; ಹೀನಾಯ ದಾಖಲೆ ಬರೆದ ಬಾಂಗ್ಲಾದೇಶದ ಮುಷ್ಫಿಕರ್ ರಹೀಂ

0

ಢಾಕಾ : ಬಾಂಗ್ಲಾದೇಶ ತಂಡದ ಹಿರಿಯ ಆಟಗಾರ ಮುಷ್ಫಿಕರ್ ರಹೀಂ ಅವರು ವಿಚಿತ್ರ ರೀತಿಯಲ್ಲಿ ಔಟಾಗುವ ಮೂಲಕ ದಾಖಲೆ ಬರೆದಿದ್ದಾರೆ.
ಹೌದು, ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚೆಂಡನ್ನು ಕೈಯಿಂದ ಹಿಡಿಯುವ ಮೂಲಕ ಔಟಾಗಿ ಹೀನಾಯ ದಾಖಲೆಗೆ ರಹೀಂಪಾತ್ರರಾಗಿದ್ದಾರೆ.

ನ್ಯೂಜಿಲ್ಯಾಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಮುಷ್ಫಿಕರ್ ರಹೀಂ ಅತ್ಯಂತ ತಾವಾಗಿಯೇ ವಿಕೆಟ್ ಒಪ್ಪಿಸಿದಂತಾಗಿದೆ. ವಿಕೆಟ್‌ಗೆ ಬಡಿಯುವ ಚೆಂಡನ್ನು ಕೈ ಯಿಂದ ತಡೆದು ವಿಚಿತ್ರವಾಗಿ ಔಟ್ ಆಗಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Advertisement. Scroll to continue reading.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ೫೦ ರನ್ ಗಳಿಸುವ ಮುನ್ನವೇ ೪ ವಿಕೆಟ್ ಕಳೆದುಕೊಂಡು ಕಂಗೆಟ್ಟಿತು. ಈ ವೇಳೆ ಬ್ಯಾಟಿಂಗ್‌ಗೆ ಇಳಿದ ಮುಷ್ಫಿಕರ್ ಉತ್ತಮ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾಗುತ್ತಿದ್ದರು. ಆದರೆ ಕೈಲ್ ಜಾಮಿಸನ್ ಅವರ ಓವರ್‌ನಲ್ಲಿ ಚೆಂಡನ್ನು ಎದುರಿಸುವ ವೇಳೆ ಎಡವಟ್ಟು ಮಾಡಿಕೊಂಡಿದ್ದಾರೆ.
ಈ ವೇಳೆ ವೇಳೆ ಚೆಂಡು ಬ್ಯಾಟ್‌ಗೆ ಬಡಿದು ಮುಂದೆ ಸಾಗಿತ್ತು. ಈ ವೇಳೆ ಚೆಂಡು ವಿಕೆಟ್‌ಗೆ ಬೀಳುತ್ತದೆ ಎಂದು ಭಾವಿಸಿದ ಮುಷ್ಫಿಕರ್ ಗಲಿಬಿಲಿಗೊಂಡು ತಮ್ಮ ಕೈಗಳಿಂದಲೇ ಚೆಂಡನ್ನು ತಡೆದಿದ್ದಾರೆ.

ಈ ವೇಳೆ ನ್ಯೂಜಿಲೆಂಡ್ ಆಟಗಾರರು ಕೂಡಲೇ ಔಟ್ ಗಾಗಿ ಅಂಪೈರ್ ಗಳತ್ತ ಮನವಿ ಮಾಡಿದರು. ಫೀಲ್ಡ್? ಅಂಪೈರ್ ಮೊದಲಿಗೆ ಔಟ್‌ನೀಡದೆ ಲೆಗ್ ಅಂಪೈರ್ ಬಳಿ ಚರ್ಚಿಸಿ ಬಳಿಕ ಮೂರನೇ ಅಂಪೈರ್?ಗೆ ಪರಿಶೀಲಿಸುವಂತೆ ಮನವಿ ಮಾಡಿದರು. ಬಳಿಕ ೩ನೇ ಅಂಪೈರ್ ವಿಡಿಯೋ ಪರಿಶೀಲಿಸಿ ಮುಷ್ಫಿಕರ್ ರಹೀಂ ಚೆಂಡನ್ನು ಕೈಯಿಂದ ತಡೆದಿರುವುದು ನಿಯಮ ಬಾಹಿರ ಎಂದು ಪರಿಗಣಿಸಿ ಔಟ್ ನೀಡಿದ್ದಾರೆ.

ಏನಿದು ನಿಯಮ :
ಬೌಲರ್ ಒಬ್ಬ ಎಸೆದ ಎಸೆತ ಬ್ಯಾಟ್‌ಗೆ ಬಡಿದು ಚೆಂಡು ವಿಕೆಟ್‌ಗೆ ಬಡಿಯುವ ಮುನ್ನ ಬ್ಯಾಟ್‌ನಿಂದ ಅಥವಾ ಕಾಲಿನಿಂದ ಇದನ್ನು ತಡೆದರೆ ಇದನ್ನು ಔಟ್ ಎಂದು ಪರಿಗಣಿಸುವುದಿಲ್ಲ. ಆದರೆ ಕೈಗಳಿಂದ ಚೆಂಡನ್ನು ತಡೆದರೆ ಇದನ್ನು ಔಟ್ ಎಂದು ಒಂದು ತೀರ್ಪು ನೀಡಲಾಗುತ್ತದೆ. ಒಂದೊಮ್ಮೆ ಬ್ಯಾಟರ್ ಕ್ರೀಸ್ ಬಿಟ್ಟು ಮುಂದೆ ಬಂದ ವೇಳೆ ಫೀಲ್ಡರ್ ಒಬ್ಬ ವಿಕೆಟ್‌ನತ್ತ ಚೆಂಡನ್ನು ಎಸೆದರೆ ಅದನ್ನು ಬ್ಯಾಟರ್ ತಡೆದರೆ ಇದು ಕೂಡ ಔಟ್ ಎಂದು ನಿರ್ಧರಿಸಲಾಗುತ್ತದೆ.

ಹೀನಾಯ ದಾಖಲೆ ಬರೆದ ರಹೀಂ :

Advertisement. Scroll to continue reading.

ಮುಷ್ಫಿಕರ್ ರಹೀಂ ಅವರು ಈ ರೀತಿ ಔಟ್ ಆದ ೧೧ನೇ ಆಟಗಾರ ಎನಿಸಿಕೊಂಡರು. ೨೨ ವರ್ಷಗಳಲ್ಲಿ ಪುರುಷರ ಟೆಸ್ಟ್ನಲ್ಲಿ ಚೆಂಡನ್ನು ಕೈಯಿಂದ ತಡೆಯುವ ಮೂಲಕ ಔಟಾದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಕೊನೆಯದಾಗಿ ಈ ರೀತಿ ಔಟಾದ ಆಟಗಾರ ಎಂದರೆ ಇಂಗ್ಲೆAಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ವಾನ್. ೨೦೦೧ಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯದಲ್ಲಿ ಮೈಕಲ್ ವಾನ್ ಇದೇ ರೀತಿ ಕೈಯಿಂದ ಚೆಂಡನ್ನು ತಡೆದು ಔಟ್ ಆಗಿದ್ದರು.
ಇದೇ ರೀತಿ ಆಸ್ಟ್ರೇಲಿಯಾ ನಾಯಕ ಸ್ಟೀವ್ ವಾ ಕೂಡ ಇದೇ ರೀತಿ ಭಾರತದ ವಿರುದ್ಧವೇ ೨೦೦೧ರಲ್ಲಿ ಕೈಯಿಂದ ಚೆಂಡನ್ನು ತಡೆದು ಔಟಾಗಿದ್ದರು. ಅಂದು ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್ ಎಸೆದಿದ್ದ ಎಸೆತವನ್ನು ಸ್ಟ್ವೀವ್ ವಾ ಡಿಫೆಂಡ್ ಮಾಡಿದ್ದರು. ಆದರೆ ಚೆಂಡು ನೆಲಕ್ಕೆ ಬಡಿದು ಬಳಿಕ ಸ್ಟಂಪ್ ನತ್ತ ಸಾಗಿತ್ತು. ಇದನ್ನು ಗಮನಿಸಿದ ಸ್ಟ್ವೀವ್ ವಾ ಕೂಡಲೇ ಕೈಯಿಂದಲೇ ಚೆಂಡನ್ನು ತಡೆದಿದ್ದರು. ಹೀಗಾಗಿ ಅವರು ಔಟ್ ಎಂದು ಘೋಷಣೆ ಮಾಡಲಾಗಿತ್ತು.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com