ಚಿಕ್ಕಮಗಳೂರು : ಗೃಹಿಣಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದಿದೆ.
ಶ್ವೇತಾ (31) ಮೃತಪಟ್ಟಿರುವ ಮಹಿಳೆ. ಮೃತ ಗೃಹಿಣಿ ಪೋಷಕರಿಂದ ಪತಿಯ ವಿರುದ್ಧ ಕೊಲೆ ಆರೋಪ ಕೇಳಿ ಬಂದಿದೆ.
Advertisement. Scroll to continue reading.
ಪತ್ನಿ ಶ್ವೇತಾ ಮೃತಪಟ್ಟ ಬಳಿಕ ತರಾತುರಿಯಲ್ಲಿ ಅಂತ್ಯಕ್ರಿಯೆಗೆ ಪತಿ ಮನೆಯವರು ಸಿದ್ದತೆ ನಡೆಸಿದ್ದರು. ಆದರೆ, ಮೃತಳ ಪೋಷಕರು ಸಾವಿನ ಬಗ್ಗೆ ಅನುಮಾನಗೊಂಡು ಅಂತ್ಯಕ್ರಿಯೆ ತಡೆದು ಶವ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿದ್ದಾರೆ.
ಆರೋಗ್ಯವಾಗಿದ್ದ ಮಗಳು ಸುಖಾಸುಮ್ಮನೆ ಸಾವಿಗೀಡಾಗಲು ಸಾಧ್ಯವಿಲ್ಲ. ನಮ್ಮ ಮಗಳಿಗೆ ಪಾಯಿಸನ್ ಇಂಜೆಕ್ಷನ್ ಚುಚ್ಚಿ ಪತಿ, ಕುಟುಂಬಸ್ಥರೇ ಕೊಲೆ ಮಾಡಿದ್ದಾರೆ ಎಂದು ಶ್ವೇತಾ ಪೋಷಕರು ಆರೋಪಿಸಿದ್ದಾರೆ.
ಮೂರು ವರ್ಷದ ಹಿಂದೆಯಷ್ಟೆ ದರ್ಶನ್ ಜೊತೆ ಶ್ವೇತಾ ವಿವಾಹವಾಗಿತ್ತು. ಪತಿ ದರ್ಶನ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ. ನಾಲ್ಕು ದಿನಗಳ ಹಿಂದೆಯಷ್ಟೇ ಬೆಂಗಳೂರಿನಿಂದ ದೇವವೃಂದಕ್ಕೆ ದರ್ಶನ್ ಮತ್ತು ಶ್ವೇತಾ ಆಗಮಿಸಿದ್ದರು. ಆದರೆ, ಇದ್ದಕ್ಕಿದ್ದಂತೆ ಹಾರ್ಟ್ ಅಟ್ಯಾಕ್ ಆಗಿ ಮೃತಪಟ್ಟಿದ್ದಾಳೆಂದು ಸಾವಿನ ಸುದ್ದಿ ಶ್ವೇತಾ ಪೋಷಕರಿಗೆ ದರ್ಶನ್ ತಿಳಿಸಿದ್ದ. ಪೋಷಕರು ಬರುವ ಮೊದಲೇ ಅಂತ್ಯಕ್ರಿಯೆಗೆ ತಯಾರಿ ತರಾತುರಿಯಲ್ಲಿ ಸಿದ್ಧತೆ ನಡೆಸಿದ್ದ ದರ್ಶನ್, ಆದರೆ ಶ್ವೇತಾ ಪೋಷಕರು ಅಂತ್ಯಕ್ರಿಯೆ ತಡೆದಿದ್ದಾರೆ. ಇದು ಸಾವಲ್ಲ, ಕೊಲೆ ಎಂದು ಆರೋಪಿಸಿದ್ದಾರೆ. ಶ್ವೇತಾಳ ಮೃತದೇಹ ಪರೀಕ್ಷೆಗಾಗಿ ಆಸ್ಪತ್ರೆಗೆ ಪೋಷಕರು ಕಳುಹಿಸಿದ್ದಾರೆ.
Advertisement. Scroll to continue reading.