ಹೊಸದಿಲ್ಲಿ: ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರ ಮನೆಯ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ 350 ಕೋಟಿ ರೂಪಾಯಿ ಕಪ್ಪು ಹಣ ಮತ್ತು ಸುಮಾರು 3 ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಜನಪ್ರಿಯ ‘ಮನಿ ಹೀಸ್ಟ್’ ವೆಬ್ ಸೀರೀಸನ್ನು ಉಲ್ಲೇಖಿಸಿದ ಪ್ರಧಾನಿ, ಕಾಂಗ್ರೆಸ್ 70 ವರ್ಷಗಳಿಂದ ದೇಶವನ್ನು ಲೂಟಿ ಮಾಡುತ್ತಿದೆ. ಒಡಿಶಾ ಮತ್ತು ಜಾರ್ಖಂಡ್ನಲ್ಲಿ ಕಾಂಗ್ರೆಸ್ ಸಂಸದ ಧೀರಜ್ ಸಾಹುಗೆ ಸಂಬಂಧಿಸಿದ ಆಸ್ತಿಗಳ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ ದಾಖಲೆಯ 353 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿದೆ ಎಂದರು.
ಕಳೆದ 70 ವರ್ಷಗಳಿಂದ ಭಾರತದಲ್ಲಿ ಕಾಂಗ್ರೆಸ್ ಪಕ್ಷ ದರೋಡೆ ಮಾಡುತ್ತಾ ಬಂದಿದೆ. ಇಂತಹ ಪಕ್ಷವನ್ನು ಭಾರತ ಹೊಂದಿರುವಾಗ ‘ಮನಿ ಹೀಸ್ಟ್’ ಸೀರೀಸ್ ಯಾರಿಗೆ ಬೇಕಾಗಿದೆ? ಎಂದು ಕೇಳಿದ್ದಾರೆ.
Advertisement. Scroll to continue reading.
ಐಟಿ ದಾಳಿ ಕುರಿತು ಪ್ರಧಾನಿ ಮೋದಿ ಪೋಸ್ಟ್ ಮಾಡಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು, ಅವರು ನಗದು ತುಂಬಿದ ಅಲ್ಮೇರಾಗಳನ್ನು ತೋರಿಸುವ ಒಂದು ಪತ್ರಿಕೆಯ ಲೇಖನವನ್ನು ಪೋಸ್ಟ್ ಮಾಡಿದ್ದರು. ಜನರಿಂದ ಲೂಟಿ ಮಾಡಿದ ಪ್ರತಿಯೊಂದು ಪೈಸೆಯನ್ನೂ ವಾಪಸ್ ಪಡೆಯುವುದು ಮೋದಿಯವರ ಗ್ಯಾರಂಟಿ ಎಂದು ಹೇಳಿದ್ದರು.
ಐಟಿ ದಾಳಿಯಲ್ಲಿ 350 ಕೋಟಿಗೂ ಹೆಚ್ಚು ನಗದು ವಸೂಲಿಯಾದ ನಂತರ, ಬಿಜೆಪಿ ಸ್ಪ್ಯಾನಿಷ್ ಶೋ ‘ಮನಿ ಹೀಸ್ಟ್’ಸ್ಪೂಫ್ ವೀಡಿಯೊವನ್ನು ಹಂಚಿಕೊಂಡಿದೆ. ‘ಕಾಂಗ್ರೆಸ್ ಪ್ರೆಸೆಂಟ್ಸ್ ದಿ ಮನಿ ಹೀಸ್ಟ್’ ಎಂಬ ಶೀರ್ಷಿಕೆಯ ವೀಡಿಯೊವು ಸಾಹು ಅವರ ಮದ್ಯದ ಸಂಸ್ಥೆಗೆ ಸಂಬಂಧಿಸಿದ ಆವರಣವೊಂದರಲ್ಲಿ ಕಂಡುಬಂದ ಅಲ್ಮೆರಾಗಳಲ್ಲಿ ನಗದು ತುಂಬಿದ ರಾಕ್ಗಳನ್ನು ತೋರಿಸಿದೆ. ಈ ವೀಡಿಯೋವನ್ನು ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ.
Advertisement. Scroll to continue reading.