ಕುಂದಾಪುರ : ಬಸವ ವಸತಿ ಯೋಜನೆಗೆ ಸಂಬಂಧಿಸಿದಂತೆ ಲಂಚ ಸ್ವೀಕರಿಸುತ್ತಿದ್ದ ಆರೋಪದಡಿ ಬೇಳೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಪಿಡಿಓ ಜಯಂತ್ ಬಂಧಿತ ಆರೋಪಿ.
ಬಸವ ವಸತಿ ಯೋಜನೆಯಲ್ಲಿ ಮನೆ ನಿರ್ಮಾಣಕ್ಕೆ ಫಲಾನುಭವಿಗಳಿಗೆ ಒಟ್ಟು 4 ಕಂತಿನಲ್ಲಿ 1.20 ಲಕ್ಷ ರೂ. ಹಣ ಬಿಡುಗಡೆಯಾಗಿದೆ. ಬಿಡುಗಡೆಯಾದ ಈ ಹಣದಲ್ಲಿ ಅರ್ಧಂಶ ಹಣ ಮಂಜೂರು ಮಾಡಿಸಲು 10 ಸಾವಿರ ಹಣ ಖರ್ಚಾಗಿದೆ. ಆ ಹಣವನ್ನು ಮರಳಿ ನೀಡುವಂತೆ ಆರೋಪಿ ಲಂಚ ಬೇಡಿಕೆಯನ್ನು ಇಟ್ಟಿದ್ದರು ಎನ್ನಲಾಗಿದೆ.
Advertisement. Scroll to continue reading.
ಆ ಬಳಿಕ ಆರೋಪಿ ಲಂಚ ಬೇಡಿಕೆ ಇಟ್ಟ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅದರಂತೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಆರೋಪಿಯು ತೆಕ್ಕಟ್ಟೆ ಜಂಕ್ಷನ್‌ನಲ್ಲಿ ದೂರುದಾರರಿಂದ 10ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement. Scroll to continue reading.