ಚಂದನವನ : ‘ಕಿರಿಕ್ ಪಾರ್ಟಿ’ ಮಾಡಿ ಎಲ್ಲರನ್ನು ರಂಜಿಸಿದ್ದ ರಕ್ಷಿತ್ ಶೆಟ್ಟಿ ‘ ಬ್ಯಾಚುಲರ್ ಪಾರ್ಟಿ ‘ ಮಾಡೋಕೆ ಸಿದ್ಧರಾಗಿದ್ದಾರೆ. ಹೌದು, ಕಿರಿಕ್ ಟೀಂನಿಂದ ಬರುತ್ತಿರೋ ಹೊಸ ಚಿತ್ರವೇ ‘ಬ್ಯಾಚುಲರ್ ಪಾರ್ಟಿ’. ಕಿರಿಕ್ ಪಾರ್ಟಿ ಬಂದು 7 ವರ್ಷಗಳಾಗಿವೆ. ಅಂತಹುದೇ ಮನರಂಜನೆ ಯಾವಾ ಸಿಗುತ್ತೆ ಅಂತ ಅಂತ ಎಲ್ಲರೂ ಕಾಯುತ್ತಿದ್ದರು. ಇದೀಗ ಸಿಹಿ ಸುದ್ದಿ ಸಿಕ್ಕಿದೆ.
‘ಕಿರಿಕ್ ಪಾರ್ಟಿ’ಯ ಬರಹಗಾರ ಅಭಿಜಿತ್ ಮಹೇಶ್ ಅವರು ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ‘ಬ್ಯಾಚುಲರ್ ಪಾರ್ಟಿ’ಗೆ ಆಕ್ಷನ್ ಕಟ್ ಹೇಳಿದ್ದಾರೆ. ಟೈಟಲ್ ಟೀಸರ್ ಬಿಡುಗಡೆಗೊಂಡಿದ್ದು, ದಿಗಂತ್, ಲೂಸ್ ಮಾದ ಯೋಗಿ ಹಾಗೂ ಅಚ್ಯುತ್ ಕುಮಾರ್ ಅವರನ್ನು ಕಾಣಬಹುದಾಗಿದೆ.
ವೀಲ್ಚೇರ್ನಲ್ಲಿ ಅಚ್ಯುತ್ ಕುಳಿತುಕೊಂಡಿದ್ದರೆ, ಅವರ ಹಿಂದೆ ಯೋಗಿ, ದಿಗಂತ್ ಓಡಿ ಬರುತ್ತಿರುವ ದೃಶ್ಯ ಸದ್ಯ ಗಮನ ಸೆಳೆಯುತ್ತಿದೆ.
Advertisement. Scroll to continue reading.
ಪರಂವಃ ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಅಮಿತ್ ಗುಪ್ತ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅರವಿಂದ್ ಛಾಯಾಗ್ರಹಣ, ಅರ್ಜುನ್ ರಾಮು ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.