ನವದೆಹಲಿ : ಸಂಸತ್ ಭದ್ರತಾ ಉಲ್ಲಂಘನೆ ಆರೋಪದಲ್ಲಿ ತಲೆಮರೆಸಿಕೊಂಡಿದ್ದ ಲಲಿತ್ ಮೋಹನ್ ಝಾ ಅವರನ್ನು ದೆಹಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಸಂಸತ್ತಿನ ಭದ್ರತಾ ಉಲ್ಲಂಘನೆಯ ಮಾಸ್ಟರ್‌ಮೈಂಡ್ ಎಂದು ಲಲಿತ್ ಝಾನನ್ನು ಗುರುತಿಸಲಾಗಿದೆ.
ಸಂಸತ್ತಿನಲ್ಲಿ ಭದ್ರತಾ ಉಲ್ಲಂಘನೆಗೆ ಸಂಬಂಧಿಸಿದಂತೆ ಬಂಧಿಸಲಾದ ನಾಲ್ವರು ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಜೊತೆಗೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ಸಂಸತ್ತಿನ ಒಳಗೆ ನಡೆದ ಪ್ರಮುಖ ಭದ್ರತಾ ಲೋಪದಲ್ಲಿ ಲೋಕಸಭೆಯ ಚೇಂಬರ್‌ಗೆ ಜಿಗಿದಿದ್ದರು ಮತ್ತು ಹೊಗೆ ಡಬ್ಬಿಗಳನ್ನು ಎಸೆದಿದ್ದರು. ಬಂಧಿಸಲಾದ ನಾಲ್ವರ ವಿರುದ್ಧ ಪೊಲೀಸರು ಭಯೋತ್ಪಾದನೆ ಆರೋಪಗಳನ್ನು ದಾಖಲಿಸಿದ್ದಾರೆ.
Advertisement. Scroll to continue reading.
ಇನ್ನು ಎಂಟು ದೆಹಲಿ ಪೊಲೀಸ್ ಸಿಬ್ಬಂದಿಯನ್ನು ಭದ್ರತಾ ಲೋಪದ ಮೇಲೆ ಅಮಾನತುಗೊಳಿಸಲಾಗಿದೆ.