ರಾಷ್ಟ್ರೀಯ

ಅಯೋಧ್ಯೆ ಮಸೀದಿಗೆ ಮೆಕ್ಕಾದ ಇಮಾಮ್‌ ಶಿಲಾನ್ಯಾಸ; ಹೇಗಿರಲಿದೆ ವಿನ್ಯಾಸ?

0

ನವದೆಹಲಿ : ಬಾಬರಿ ಮಸೀದಿಯ ಬದಲಿಗೆ ಅಯೋಧ್ಯೆಯಲ್ಲಿ ಪ್ರಸ್ತಾವಿತ ಮಸೀದಿಗೆ ಶಿಲಾನ್ಯಾಸವನ್ನು ಇಮಾಮ್-ಎ-ಹರಾಮ್ ಅಥವಾ ಮೆಕ್ಕಾದ ಕಾಬಾದ ಪವಿತ್ರ ಮಸೀದಿಯಲ್ಲಿ ನಮಾಜ್ ನಡೆಸುವ ಇಮಾಮ್ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಬಾಬರಿ ಮಸೀದಿಯ ಸ್ಥಳದಲ್ಲಿ ಮೊಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿಯನ್ನು ನಿರ್ಮಾಣ ಮಾಡಲಾಗುತ್ತದೆ. ಅಯೋಧ್ಯೆಯಿಂದ 25 ಕಿಮೀ ದೂರದಲ್ಲಿರುವ ಧನ್ನಿಪುರದಲ್ಲಿ ಇದರ ನಿರ್ಮಾಣವಾಗಲಿದೆ. ಅಯೋಧ್ಯೆ ರಾಮ ಮಂದಿರ ವಿವಾದದಲ್ಲಿ ಸುಪ್ರೀಂ ಕೋರ್ಟ್ ಆದೇಶಕ್ಕೆ ಅನುಗುಣವಾಗಿ ಉತ್ತರ ಪ್ರದೇಶ ಸರ್ಕಾರವು ಮುಸ್ಲಿಮರಿಗೆ ಈ ಪ್ರದೇಶದಲ್ಲಿ ಜಾಗವನ್ನು ನೀಡಿದೆ.

ಅತ್ಯಂತ ದೊಡ್ಡ ಮಸೀದಿ :

Advertisement. Scroll to continue reading.

ವರದಿಯ ಪ್ರಕಾರ, ಮುಂಬೈ ಮೂಲದ ಬಿಜೆಪಿ ನಾಯಕ ಹಾಗೂ ಮುಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿರುವ ಹಾಜಿ ಅರಾಫತ್ ಶೇಖ್,  ಅಯೋಧ್ಯೆಯಲ್ಲಿ ಹೊಸ ಮಸೀದಿಯು ಭಾರತದಲ್ಲಿಯೇ ಅತ್ಯಂತ ದೊಡ್ಡದಾಗಿರಲಿದೆ ಎಂದು ಹೇಳಿದ್ದಾರೆ.

ಇದು 21 ಅಡಿ ಎತ್ತರ ಮತ್ತು 36 ಅಡಿ ಅಗಲದ ವಿಶ್ವದ ಅತಿದೊಡ್ಡ ಕುರಾನ್ ಅನ್ನು ಹೊಂದಿರುತ್ತದೆ ಎಂದು ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ಮಸೀದಿಯನ್ನು ನಿರ್ಮಿಸುವ ಕಾರ್ಯವನ್ನು ಆರಂಭದಲ್ಲಿ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ವಹಿಸಿಕೊಂಡಿದೆ. ಈ ಟ್ರಸ್ಟ್ 2020ರ ಜುಲೈ 29 ರಂದು ರಚನೆಯಾಯಿತು. ಆದಾಗ್ಯೂ, ಅಕ್ಟೋಬರ್ 2023 ರಲ್ಲಿ, ಮುಂಬೈನಲ್ಲಿ ಫೌಂಡೇಶನ್ ಅಧ್ಯಕ್ಷ ಜುಫರ್ ಅಹ್ಮದ್ ಫಾರೂಕಿ ಭಾಗವಹಿಸಿದ್ದ ಸಮಾರಂಭದಲ್ಲಿ, ಅದು ಮಸೀದಿಗೆ ಮಸೀದಿ ಮುಹಮ್ಮದ್ ಬಿನ್ ಅಬ್ದುಲ್ಲಾ ಎಂದು ಹೆಸರಿಸಲಾಗುವುದು ಎಂದು ಘೋಷಿಸಿದರು.

Advertisement. Scroll to continue reading.

ಮಸೀದಿಯು ಇಸ್ಲಾಮಿನ ಐದು ಸ್ತಂಭಗಳಾದ ಕಲಿಮಾ, ನಮಾಜ್, ರೋಜಾ, ಹಜ್ ಮತ್ತು ಜಕಾತ್ ಅನ್ನು ಸಂಕೇತಿಸುವ ಐದು ಮಿನಾರ್‌ಗಳನ್ನು ಹೊಂದಿರುತ್ತದೆ” ಎಂದು ಶೇಖ್ ತಿಳಿಸಿದ್ದಾರೆ. ಮಸೀದಿಯ ಹೊರತಾಗಿ, ಸಂಕೀರ್ಣವು ಕ್ಯಾನ್ಸರ್ ಆಸ್ಪತ್ರೆ, ಶಾಲೆಗಳು ಮತ್ತು ಕಾಲೇಜುಗಳು, ಮ್ಯೂಸಿಯಂ ಗ್ರಂಥಾಲಯ ಮತ್ತು ಸಂಪೂರ್ಣ ಸಸ್ಯಾಹಾರಿ ಅಡುಗೆಮನೆಯನ್ನು ಹೊಂದಿದ್ದು, ಸಂದರ್ಶಕರಿಗೆ ಉಚಿತ ಆಹಾರವನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ತಾಜ್ ಮಹಲ್ ಮೀರಿಸಲಿದೆ :

ವಝು ಖಾನಾದ ಬಳಿ ಇರುವ ಬೃಹತ್ ಅಕ್ವೇರಿಯಂ ಅಥವಾ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳನ್ನು ಹೊಂದಿರುವ ಅಬ್ಯುಲೇಷನ್ ಜಾಗವು ಸಂಕೀರ್ಣದ ಪ್ರಮುಖ ಆಕರ್ಷಣೆಯಾಗಿದೆ ಎಂದು ಶೇಖ್ ಹೇಳಿದರು. ಮಸೀದಿಯ ಸೌಂದರ್ಯವು ತಾಜ್ ಮಹಲ್ ಅನ್ನು ಮೀರಿಸುತ್ತದೆ ಎಂದು ಶೇಖ್ ಹೇಳಿದ್ದಾರೆ.

ಸಂಜೆ ಆಗುತ್ತಿದ್ದಂತೆ ಮಸೀದಿಯಲ್ಲಿನ ಕಾರಂಜಿಗಳು ಉದಯವಾಗಲಿದೆ. ಇದು ತಾಜ್ ಮಹಲ್‌ಗಿಂತ ಹೆಚ್ಚು ಸುಂದರವಾಗಿರುತ್ತದೆ ಮತ್ತು ಎಲ್ಲರೂ ಇಲ್ಲಿ ಪ್ರಾರ್ಥಿಸದಿದ್ದರೂ ಶಾಂತಿ ಮತ್ತು ಸೌಹಾರ್ದತೆಯ ಈ ಸ್ಮಾರಕವನ್ನು ನೋಡಲು ಎಲ್ಲಾ ಧರ್ಮಗಳ ಜನರು ಬರುತ್ತಾರೆ ಎಂದು ಶೇಖ್ ಹೇಳಿದರು.

Advertisement. Scroll to continue reading.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com