ಉಡುಪಿ: ಖ್ಯಾತ ನಟಿ ಸಾಯಿ ಪಲ್ಲವಿ ಅವರು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದರು. ಕನಕನ ಕಿಂಡಿಯ ಮೂಲಕ ಕೃಷ್ಣ ದೇವರ ದರ್ಶನ ಪಡೆದರು.
ಕಾಣಿಯೂರು ಮಠಕ್ಕೆ ತೆರಳಿ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದಿದ್ದಾರೆ. ಮಠಕ್ಕೆ ಭೇಟಿ ನೀಡಿದ ಸಾಯಿ ಪಲ್ಲವಿ ಅವರನ್ನು ಕೃಷ್ಣ ಮಠದ ವತಿಯಿಂದ ಗೌರವಿಸಲಾಯಿತು.
ಸದ್ಯ ಸಾಯಿ ಪಲ್ಲವಿ ನಾಗಚೈತನ್ಯ ಅವರೊಂದಿಗೆ ‘ಥಾಂಡೆಲ್’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಚಿತ್ರೀಕರಣ ಮಲ್ಪೆಯಲ್ಲಿ ಆರಂಭಗೊಂಡಿದೆ ಎಂದು ತಿಳಿದುಬಂದಿದೆ.
ʼಕಾರ್ತಿಕೇಯ 2ʼ ಸಿನಿಮಾದ ನಿರ್ದೇಶಕ ಚಂದೂ ಮೊಂಡೆತಿ ಅವರು ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಸತ್ಯ ಘಟನೆಯನ್ನು ಆಧರಿಸಿ ಸಿನಿಮಾ ಬರುತ್ತಿದೆ. ಸಾಯಿ ಪಲ್ಲವಿ ಹಾಗೂ ನಾಗಚೈತನ್ಯ ʼಲವ್ ಸ್ಟೋರಿʼ ಬಳಿಕ ʼಥಂಡಲ್ʼ ಮೂಲಕ ಮತ್ತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.