ನವದೆಹಲಿ : ಭಾರತೀಯ ಕುಸ್ತಿ ಫೆಡರೇಶನ್ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಸಹಾಯಕರು ಉನ್ನತ ಹುದ್ದೆಗೆ ನೇಮಕಗೊಂಡಿದ್ದು, ಕುಸ್ತಿಗೆ ಸಾಕ್ಷಿ ಮಲಿಕ್ ವಿದಾಯ ಹೇಳಿದ್ದಾರೆ. ಇದರ ಬೆನ್ನಲ್ಲೇ ಬಜರಂಗಿ ಪೂನಿಯಾ ಪದ್ಮಶ್ರೀ ಹಿಂತಿರುಗಿಸಿದ್ದರು. ಇದೀಗ ಅವರಿಗೆ ಕುಸ್ತಿಪಟು ವೀರೇಂದ್ರ ಸಿಂಗ್ ಬೆಂಬಲ ನೀಡಿದ್ದಾರೆ.
“ನಾನು ನನ್ನ ಸಹೋದರಿ ಮತ್ತು ದೇಶದ ಮಗಳಿಗಾಗಿ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸುತ್ತೇನೆ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಜೀ, ನಿಮ್ಮ ಮಗಳು ಮತ್ತು ನನ್ನ ಸಹೋದರಿ ಸಾಕ್ಷಿ ಮಲಿಕ್ ಅವರ ಬಗ್ಗೆ ನನಗೆ ಹೆಮ್ಮೆ ಇದೆ. ಹೌದು,ಯಾಕೆ…!?
ಆದರೆ, ದೇಶದ ಅಗ್ರ ಆಟಗಾರರು ಸಹ ತಮ್ಮ ನಿರ್ಧಾರವನ್ನ ತೆಗೆದುಕೊಳ್ಳುವಂತೆ ನಾನು ವಿನಂತಿಸುತ್ತೇನೆ”ಎಂದು ಪೋಸ್ಟ್ ಮಾಡಿದ್ದಾರೆ.
Advertisement. Scroll to continue reading.
ಅಲ್ಲದೇ, ವೀರೇಂದ್ರ ಸಿಂಗ್ ಅವರು ಸಚಿನ್ ತೆಂಡೂಲ್ಕರ್ ಮತ್ತು ನೀರಜ್ ಚೋಪ್ರಾ ಅವರನ್ನ ಟ್ಯಾಗ್ ಮಾಡಿದ್ದಾರೆ.