ಬಿಗ್ ಬಾಸ್ ಸೀಸನ್ 10 ಈ ಭಾರೀ ಸಕತ್ ಫೈಟಿಂಗ್‌ನಿಂದ ಕೂಡಿದೆ. ಮನೆಯೊಳಗೆ ಸಾಕಷ್ಟು ಚರ್ಚೆ, ಜಗಳ, ಮುನಿಸುಗಳು ನಡೆಯುತ್ತಲೇ ಇವೆ. ಒಬ್ಬರ ಮೇಲೊಬ್ಬರು ಕೆಸರೆರೆಚಾಟ ಮಾಡುತ್ತಲೇ ಇದ್ದಾರೆ. ಇದು ಬಿಗ್ ಬಾಸ್ ಮನೆ ಒಳಗಿನ ಕಥೆಯಾದರೆ, ಹೊರಗೇನೂ ಕಮ್ಮಿ ಇಲ್ಲ ಬಿಡಿ.
ಬಿಗ್ ಬಾಸ್ ಅಭಿಮಾನಿಗಳು ಅವರರವ ಇಷ್ಟದ ಸ್ಪರ್ಧಿಗಳ ಪೇಜ್‌ಗಳನ್ನು ಮಾಡಿಕೊಂಡು ಪ್ರೋತ್ಸಾಹ ಕೊಡುತ್ತಿದ್ದಾರೆ. ಅದಕ್ಕೆ ಭಿನ್ನ ಭಿನ್ನ ಕಮೆಂಟ್ಸ್‌ಗಳು ಬರುತ್ತಿರುತ್ತವೆ.
ಈ ನಡುವೆ ಬಿಗ್ ಬಾಸ್ ಮನೆಯೊಳಗೆ ಮೊಬೈಲ್ ಫೋನ್ ಬಳಸಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಅಲ್ಲದೇ, ಈ ಕುರಿತು ಫೋಟೋ ವೈರಲ್ ಆಗಿ ಸಂಚಲನ ಸೃಷ್ಟಿಸಿತ್ತು.
Advertisement. Scroll to continue reading.
ಸದ್ಯ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಬಿಗ್ ಬಾಸ್ ನ್ಯಾಯಾಲಯದಲ್ಲಿ ಶ್ರುತಿ ಜಡ್ಜ್ :
ಬಿಗ್ ಬಾಸ್ ವಾರದ ಕತೆಯಲ್ಲಿ ಈ ಬಾರಿ ಕಿಚ್ಚ ಸುದೀಪ್ ಇರುವುದಿಲ್ಲ.ಬದಲಿಗೆ ನಟಿ ಶ್ರುತಿ ಎಂಟ್ರಿ ಕೊಡುತ್ತಿದ್ದಾರೆ. ಬಿಗ್ ಬಾಸ್ ನ್ಯಾಯಾಲಯದಲ್ಲಿ ಶ್ರುತಿ ಪಂಚಾಯಿತಿ ನಡೆಸಲಿದ್ದಾರೆ.
ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರದ ಕೊನೆಯಲ್ಲಿ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು. ಈ ಬಾರಿ ಶ್ರುತಿ ಸರದಿ…ನ್ಯಾಯ ಪಂಚಾಯತಿ ನಡೆಸಲು ಶ್ರುತಿ ಆಗಮಿಸುತ್ತಿದ್ದು, ವೀಕ್ಷಕರಲ್ಲಿ ಕುತೂಹಲ ಹುಟ್ಟಿಸಿದೆ.
Advertisement. Scroll to continue reading.
ಮೈಲಾರ್ಡ್ ಅದು ಫೋನಲ್ಲ :
ಇತ್ತೀಚಿಗೆ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅದರಲ್ಲಿ ಸಂಗೀತಾ ಪಕ್ಕ ಪ್ಲಗ್‌ನಲ್ಲಿ ಚಾರ್ಜರ್ ಕಾಣಿಸಿಕೊಂಡಿತ್ತು. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಮೊಬೈಲು ಬಳಲುತ್ತಿದ್ದಾರೆ ಎಂಬ ಗುಲ್ಲೊದು ಹಬ್ಬಿತ್ತು. ಈ ವಾರದ ಪಂಚಾಯಿತಿಯಲ್ಲಿ ಅದಕ್ಕೆ ಉತ್ತರ ಸಿಕ್ಕಿದೆ.
ಶ್ರುತಿ, ಸ್ಪರ್ಧಿಗಳಲ್ಲಿ, ಮೊಬೈಲ್ ಬಳಸುತ್ತಿದ್ದೀರಾ ಎಂದು ಕೇಳಿದ್ದಾರೆ. ಇದಕ್ಕೆ ಸ್ಪರ್ಧಿಗಳು ಇಲ್ಲ ಎಂದಿದ್ದಾರೆ. ವೈರಲ್ ಫೋಟೋ ಡಿಸ್‌ಪ್ಲೇ ಮಾಡಲು ಶ್ರುತಿ ಹೇಳಿದ್ದಾರೆ. ಈ ಫೋಟೋ ನೋಡಿ ಸ್ಪರ್ಧಿಗಳು ನಕ್ಕಿದ್ದಾರೆ.
ಹೌದು, ಫೋಟೋದಲ್ಲಿ ಕಾಣಿಸಿಕೊಂಡಿರುವಂತೆ ಅದು ಚಾರ್ಜರ್ ಹೌದು…ಆದರೆ, ಅದು ಮೊಬೈಲ್ ಚಾರ್ಜರ್ ಅಲ್ಲ…ಬದಲಿಗೆ ಟ್ರಿಮ್ಮರ್ ಚಾರ್ಜರ್ ಆಗಿದೆ. ಮೈಕಲ್ ಹಾಗೂ ವಿನಯ್ ಅದು ತಮ್ಮ ಟ್ರಿಮ್ಮರ್ ಚಾರ್ಜರ್ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
Advertisement. Scroll to continue reading.
ಇನ್ನು ಬಿಗ್ ಬಾಸ್ ಮನೆಯಲ್ಲಿ ಗ್ರ್ಯಾಂಡ್ ಫಿನಾಲೆ ಹತ್ತಿರವಾಗುತ್ತಿದ್ದಂತೆ ಸ್ಪರ್ಧೆ ಹೆಚ್ಚಾಗುತ್ತಿದೆ. ಮನಸ್ತಾಪ, ಜಗಳ ನಡೆಯುವುದೂ ಹೆಚ್ಚಾಗಿದೆ.