ಕುಂದಾಪುರ : ಹಾವು ಕಚ್ಚಿ ಚಿಕಿತ್ಸೆ ಫಲಿಸದೆ ಮಹಿಳೆ ಸಾವನ್ನಪ್ಪಿರುವ ಘಟನೆ ಅಂಪಾರು ಗ್ರಾಮದಲ್ಲಿ ನಡೆದಿದೆ. ಹೇಮಲತಾ(೫೮) ಮೃತ ಮಹಿಳೆ.
ಡಿ.೨೦ ರಂದು ಮನೆಯ ಕೊಟ್ಟಿಗೆಯಲ್ಲಿರುವ ತೆಂಗಿನಕಾಯಿ ಹಾಕುವ ಕೋಣೆಗೆ ಹೋದಾಗ ಹೇಮಲತಾ ಅವರ ಕಾಲಿನ ಪಾದಕ್ಕೆ ಹಾವು ಕಚ್ಚಿದೆ.
Advertisement. Scroll to continue reading.
ಕುಂದಾಪುರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ, ಚಿಕಿತ್ಸೆ ಫಲಿಸದೆ ಹೇಮಲತಾ ಭಾನುವಾರ ಮೃತಪಟ್ಟಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.