ಸಿನಿಮಾ

ಮಗಳ ಮುಖ ರಿವೀಲ್ ಮಾಡಿದ ರಣಬೀರ್ – ಆಲಿಯಾ ದಂಪತಿ

0

ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರು ಮಗಳ ಮುಖವನ್ನು ಇದುವರೆಗೆ ಎಲ್ಲಿಯೂ ತೋರಿಸಿರಲಿಲ್ಲ. ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರಲಿಲ್ಲ. ಇದರಿಂದ ಅಭಿಮಾನಿಗಳು ನಿರಾಶರಾಗಿದ್ದರು. ಆದರೆ, ಕ್ರಿಸ್‌ಮಸ್ ಹಬ್ಬ ರಣಬೀರ್ ಮತ್ತು ಆಲಿಯಾ ತಮ್ಮ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಹೌದು, ತಮ್ಮ ಮಗಳು ರಾಹಾಳ ಮುಖ ರಿವೀಲ್ ಮಾಡಿದ್ದಾರೆ.

ರಾಹಾ ಜೊತೆಗೆ ರಣಬೀರ್ ಮತ್ತು ಆಲಿಯಾ ಇಬ್ಬರೂ ಕ್ಯಾಮೆರಾ ಮುಂದೆ ಪೋಸ್ ನೀಡುತ್ತಿರುವ ವೀಡಿಯೋ ಸದ್ದು ಮಾಡುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

ಈ ವಿಡಿಯೋ ನೋಡಿದ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ. ಮೊದಲ ಬಾರಿಗೆ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ತಮ್ಮ ಮಗಳು ರಾಹಾಳನ್ನು ತೋರಿಸಿದ್ದಾರೆ. ರಣಬೀರ್ ಕಪೂರ್ ರಾಹಾಳನ್ನು ಹಿಡಿದುಕೊಂಡಿದ್ದು, ಆಲಿಯಾ ಪಕ್ಕದಲ್ಲಿ ನಿಂತು ಪೋಸ್ ಕೊಟ್ಟಿದ್ದಾರೆ. ಮೊಟ್ಟಮೊದಲ ಬಾರಿಗೆ ತನ್ನ ಮಗಳನ್ನು ಎಲ್ಲರ ಮುಂದೆ ತಂದ ಖುಷಿ ಅವರ ಮುಖದಲ್ಲಿ ಕಾಣಬಹುದಾಗಿದೆ.

ವಿಡಿಯೋದಲ್ಲಿ ರಾಹಾ ಗುಲಾಬಿ ಮತ್ತು ಬಿಳಿ ಬಣ್ಣದ ಫ್ರಾಕ್ ತೊಟ್ಟಿದ್ದಾರೆ. ರಣಬೀರ್ ಕಪೂರ್ ಕಪ್ಪು ಪ್ಯಾಂಟ್‌ನೊಂದಿಗೆ ಮ್ಯಾಚಿಂಗ್ ಜಾಕೆಟ್ ಮತ್ತು ಶರ್ಟ್ ಧರಿಸಿದ್ದರೆ, ಆಲಿಯಾ ಫ್ಲೋರಲ್ ಪ್ರಿಂಟ್ ಒನ್ ಪೀಸ್ ಧರಿಸಿದ್ದರು. ಇದರೊಂದಿಗೆ ಆಲಿಯಾ ಕೂದಲಿಗೆ ಕ್ರಿಸ್ಮಸ್ ಬ್ಯಾಂಡ್ ಹಾಕಿಕೊಂಡಿದ್ದಾರೆ. ಮೂವರ ಲುಕ್ ನೋಡಿ ನೆಟ್ಟಿಗರು ಖುಷಿ ಪಟ್ಟಿದ್ದಾರೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com