ಬೆಂಗಳೂರು : ರಾಜ್ಯದಲ್ಲಿ 34 ಜನರಿಗೆ ಜೆಎನ್ 1 ರೂಪಾಂತರಿ ಕೊರೋನಾ ವೈರಸ್ ತಗುಲಿದೆ 3 ಮಂದಿ ಸಾವಿಗೀಡಾಗಿರುವ ಬಗ್ಗೆ ವರದಿಯಾಗಿದೆ.
3,155 ಜನರಿಗೆ ಸೋಮವಾರ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಹೊಸದಾಗಿ 125 ಜನರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಒಟ್ಟು ಸೋಂಕಿತರ ಸಂಖ್ಯೆ 436. ಪ್ರಸ್ತುತ 323 ಜನರು ಗೃಹ ಆರೈಕೆಯಲ್ಲಿದ್ದು, 21 ಮಂದಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ. ಏಳು ಮಂದಿ ಐಸಿಯುನಲ್ಲಿ ಹಾಗೂ 14 ಜನರು ಸಾಮಾನ್ಯ ವಾರ್ಡ್‌ನಲ್ಲಿದ್ದಾರೆ.
ರಾಜ್ಯದಲ್ಲಿ 192 ಸೋಂಕಿತರ ಮಾದರಿಯನ್ನು ವಂಶವಾಹಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 60 ಮಾದರಿಗಳ ಫಲಿತಾಂಶ ಲಭ್ಯವಾಗಿದೆ. 34 ಮಂದಿಯಲ್ಲಿ ಹೊಸ ವೈರಾಣು ಜೆಎನ್ 1 ಪತ್ತೆಯಾಗಿದೆ. ಈ ಪೈಕಿ ಈಗಾಗಲೇ ಮೂರು ಮಂದಿ ಸಾವಿಗೀಡಾಗಿದ್ದಾರೆ. ಉಳಿದ 31 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement. Scroll to continue reading.
ಬೆಂಗಳೂರಿನಲ್ಲಿ 20, ಮೈಸೂರು 4, ಮಂಡ್ಯ 3, ರಾಮನಗರ 1, ಬೆಂಗಳೂರು ಗ್ರಾಮಾಂತರ 1, ಕೊಡಗು 1, ಚಾಮರಾಜನಗರ 1 ಹೊಸ ವೈರಾಣು ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ ಇಬ್ಬರು ಹಾಗೂ ರಾಮನಗರದಲ್ಲಿ ಒಬ್ಬರು ಈ ಹೊಸ ವೈರಾಣುವಿನಿಂದ ಮೃತಪಟ್ಟಿದ್ದಾರೆ.