ಹೈದರಾಬಾದ್ : ಇತ್ತೀಚೆಗೆ ಹಲವಾರು ವಿಚಾರದಲ್ಲಿ ಮದುವೆ ರದ್ದಾಗುವ ಪ್ರಕರಣಗಳನ್ನು ನೋಡಿದ್ದೇವೆ. ವರದಕ್ಷಿಣೆ ಇರಬಹುದು, ಪ್ರೇಮ ಪ್ರಕರಣಗಳಿರಬಹುದು ಹೀಗೆ ಅನೇಕ ಕಾರಣಗಳಿಂದ ಮದುವೆ ಮುರಿಯುತ್ತವೆ. ಆದರೆ, ಇದೀಗ ವಿಚಿತ್ರ ಘಟನೆಯೊಂದು ನಡೆದಿದೆ. ಹೌದು, ಇಲ್ಲೊಂದು ಮದುವೆ ಊಟದ ವಿಚಾರಕ್ಕೆ ಮುರಿದು ಬಿದ್ದಿದೆ. ಅದರಲ್ಲೂ ಊಟದ ಮೆನುವಿನಲ್ಲಿ ಮಟನ್ ಮೂಳೆ ಇಲ್ಲವೆಂದು ಸಿಟ್ಟಿಗೆದ್ದ ವರನ ಕಡೆಯವರು ಮದುವೆಯನ್ನೇ ರದ್ದು ಮಾಡಿದ್ದಾರೆ. ಈ ಘಟನೆ ನಡೆದಿದ್ದು ತೆಲಂಗಾಣದಲ್ಲಿ.
ನಿಜಾಮಾಬಾದ್ ಮೂಲದ ವಧು ಮತ್ತು ಜಗ್ತಿಯಾಲ್ ಮೂಲದ ವರನ ಮದುವೆ ನಿಶ್ಚಿತಾರ್ಥವು ನವೆಂಬರ್ ನಲ್ಲಿ ವಧುವಿನ ನಿವಾಸದಲ್ಲಿ ನಡೆದಿದೆ. ಆದರೆ ನಂತರ ಮದುವೆ ರದ್ದು ಮಾಡಲಾಗಿದೆ.
ವಧುವಿನ ಮನೆಯವರು ತಮ್ಮ ಕುಟುಂಬ ಸದಸ್ಯರು ಮತ್ತು ವರನ ಸಂಬಂಧಿಕರು ಸೇರಿದಂತೆ ಅತಿಥಿಗಳಿಗಾಗಿ ಮಾಂಸಾಹಾರಿ ಮೆನುವನ್ನು ಏರ್ಪಡಿಸಿದ್ದರು. ನಿಶ್ಚಿತಾರ್ಥ ಸಮಾರಂಭದ ಬಳಿಕ ಗಲಾಟೆ ಆರಂಭವಾಗಿದೆ. ಊಟದಲ್ಲಿ ಮಟನ್ ಮೂಳೆ ಇಲ್ಲವೆಂದು ವರನ ಕಡೆಯವರು ಪ್ರಶ್ನೆ ಮಾಡಿದ್ದಾರೆ. ಈಗ ವಧುವಿನ ಕಡೆಯವರು ಮಟನ್ ಮೂಳೆಯನ್ನು ಮಾಡಿಸಿಲ್ಲ ಎಂದಿದ್ದಾರೆ. ಆಗ ಗಲಾಟೆ ಜೋರಾಗಿದೆ. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿದ್ದಾರೆ.
Advertisement. Scroll to continue reading.
ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು ಜಗಳವನ್ನು ಪರಿಹರಿಸಲು ವರನ ಕುಟುಂಬವನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೆ ವರನ ಮನೆಯವರು ಒಪ್ಪಿಕೊಳ್ಳಲ್ಲ.
ಮೆನುವಿನಲ್ಲಿ ಮಟನ್ ನಳ್ಳಿ ಮೂಳೆ ಇಲ್ಲ ಎಂಬ ವಿಚಾರವನ್ನು ವಧುವಿನ ಕುಟುಂಬವು ಉದ್ದೇಶಪೂರ್ವಕವಾಗಿ ನಮ್ಮಿಂದ ದೂರವಿಟ್ಟಿದೆ ಎಂದು ಅವರು ವಾದಿಸಿದರು. ಅಂತಿಮವಾಗಿ, ವರನ ಕುಟುಂಬವು ಮದುವೆಯನ್ನು ರದ್ದುಗೊಳಿಸುವುದರೊಂದಿಗೆ ನಿಶ್ಚಿತಾರ್ಥವು ಕೊನೆಗೊಂಡಿತು.
Advertisement. Scroll to continue reading.