ಚಂದನವನ : ಹಿರಿಯ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ನಿಧನರಾಗಿದ್ದಾರೆ. ಅವರಿಗೆ 57 ವರ್ಷ ವಯಸ್ಸಾಗಿತ್ತು. ಅವರು ಹೃದಯಾಘಾತದಿಂದ ನಿಧನಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಜಾಲಿ ಅವರು ಹುಟ್ಟಿದ್ದು 1966ರಲ್ಲಿ. ಕೇರಳದ ಅಲೆಪ್ಪೆಯಲ್ಲಿ ಜನಿಸಿದರು. ಅವರು ಬೆಳೆದಿದ್ದು ಬೆಂಗಳೂರಿನಲ್ಲಿ. ಅವರು ಬೆಂಗಳೂರಿನಲ್ಲೇ ಶಿಕ್ಷಣ ಪಡೆದರು. ಬೈಕ್ ಮೆಕಾನಿಕ್ ಆಗಿ ಜಾಲಿ ಬಾಸ್ಟಿನ್ ವೃತ್ತಿ ಆರಂಭಿಸಿದರು. ಅವರನ್ನು ಗುರುತಿಸಿದ ಕೆಲವರು ಸ್ಟಂಟ್ಮನ್ ಆಗಿ ಚಿತ್ರರಂಗಕ್ಕೆ ಪರಿಚಯಿಸಿದರು. ‘ಪ್ರೇಮಲೋಕ’ ಚಿತ್ರದಲ್ಲಿ ರವಿಚಂದ್ರನ್ ಅವರಿಗೆ ಡ್ಯೂಪ್ ಹಾಕಿದರು. ಆಗ ಅವರಿಗೆ 17 ವರ್ಷ ವಯಸ್ಸು.
ಕನ್ನಡ, ಮಲಯಾಳಂ, ಹಿಂದೆ, ತಮಿಳು, ತೆಲುಗು ಸೇರಿದಂತೆ ಹಲವಾರು ಭಾಷೆಯ ಸಿನಿಮಾಗಳಲ್ಲಿ ಸಾಹಸ ನಿರ್ದೇಶಕರಾ ಜಾಲಿ ಬಾಸ್ಟಿನ್ ಕೆಲಸ ಮಾಡಿದ್ದಾರೆ.
Advertisement. Scroll to continue reading.
ಈವರೆಗೆ 900ಕ್ಕೂ ಅಧಿಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಒಂದು ಕಾಲದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಜಾಲಿ ಮಾಸ್ಟರ್ ಪ್ರೇಮಲೋಕ, ಶಾಂತಿ ಕ್ರಾಂತಿ, ಅಣ್ಣಯ್ಯ, ಪುಟ್ನಂಜ ಸೇರಿದಂತೆ ಸೂಪರ್ ಹಿಟ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಫೈಟ್ ಮಾಸ್ಟರ್ ಆಗಿದ್ದ ಅವರು ಚಿತ್ರ ನಿರ್ದೇಶಕನಾಗಿ ‘ನಿನಗಾಗಿ ಕಾದಿರುವೆ’ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಸದ್ಯ ದುನಿಯಾ ವಿಜಯ್ ನಟನೆಯ ಭೀಮ ಸಿನಿಮಾದಲ್ಲಿ ಜಾಲಿ ನಟಿಸುತ್ತಿದ್ದರು.
Advertisement. Scroll to continue reading.