ಕತಾರ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಎಂಟು ಮಾಜಿ ಸಿಬ್ಬಂದಿಯ ಶಿಕ್ಷೆಯನ್ನು ಕತಾರ್ ಕೋರ್ಟ್ ಕಡಿತಗೊಳಿಸಿದೆ ಎಂದು ವಿದೇಶಾಂಗ ಸಚಿವಾಲಯ ಗುರುವಾರ ತಿಳಿಸಿದೆ.
ಭಾರತೀಯ ನೌಕಾಪಡೆಯ ಈ ಎಂಟು ಮಾಜಿ ಅಧಿಕಾರಿಗಳು ಕಳೆದ ವರ್ಷ ಆಗಸ್ಟ್‌ನಿಂದ ಕತಾರ್‌ನಲ್ಲಿ ಜೈಲಿನಲ್ಲಿದ್ದಾರೆ. ಈ ಎಲ್ಲಾ ಮಾಜಿ ಅಧಿಕಾರಿಗಳ ವಿರುದ್ಧದ ಆರೋಪಗಳ ಬಗ್ಗೆ ಕತಾರ್ ಇನ್ನೂ ಮಾಹಿತಿ ನೀಡಿಲ್ಲ. ಆದರೆ, ಇವರೆಲ್ಲರ ಮೇಲೆ ಗೂಢಚಾರಿಕೆ ಆರೋಪ ಹೊರಿಸಲಾಗಿದೆ ಎಂದು ವರದಿಯಾಗಿದೆ.
ಇವರೆಲ್ಲರೂ ಕತಾರ್‌ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಕಂಪನಿಯು ಕತಾರಿ ಎಮಿರಿ ನೌಕಾಪಡೆಗೆ ತರಬೇತಿ ಮತ್ತು ಇತರ ಸೇವೆಗಳನ್ನು ಒದಗಿಸುತ್ತದೆ.
Advertisement. Scroll to continue reading.
ಮಾಧ್ಯಮ ವರದಿಗಳ ಪ್ರಕಾರ, ಡಹ್ರಾ ಗ್ಲೋಬಲ್ ಟೆಕ್ನಾಲಜಿ ಮತ್ತು ಕನ್ಸಲ್ಟೆನ್ಸಿ ಸರ್ವಿಸಸ್ ಕಂಪನಿಯು ತನ್ನನ್ನು ಕತಾರ್ ರಕ್ಷಣೆ, ಭದ್ರತೆ ಮತ್ತು ಇತರ ಸರ್ಕಾರಿ ಏಜೆನ್ಸಿಗಳ ಸ್ಥಳೀಯ ಪಾಲುದಾರ ಎಂದು ವಿವರಿಸುತ್ತದೆ. ರಾಯಲ್ ಓಮನ್ ಏರ್ ಫೋರ್ಸ್ ನಿವೃತ್ತ ಸ್ಕ್ವಾಡ್ರನ್ ಲೀಡರ್ ಖಾಮಿಸ್ ಅಲ್ ಅಜ್ಮಿ ಈ ಕಂಪನಿಯ ಸಿಇಒ ಆಗಿದ್ದಾರೆ.
ಕತಾರ್ ನಲ್ಲಿ ಗುಪ್ತ ಮಾಹಿತಿಯ ಸೋರಿಕೆಯ ಕಾರಣ ಭಾರತದ 8 ಮಾಜಿ ನೌಕಾಪಡೆಯ ಯೋಧರಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಲಾಗಿತ್ತು. ಈ ಬಗ್ಗೆ ಭಾರತ ಸರ್ಕಾರ ಮಧ್ಯಪ್ರವೇಶಿಸಿ, ಅವರ ಶಿಕ್ಷೆಯ ಪ್ರಮಾಣ ಕಡಿತಕ್ಕೂ ಮನವಿ ಮಾಡಲಾಗಿತ್ತು.
ಭಾರತದ ಮನವಿಗೆ ಪುರಸ್ಕರಿಸಿರುವಂತ ಕತಾರ್ ಸರ್ಕಾರವು, ಭಾರತೀಯ ನೌಕಾಪಡೆಯ 8 ಮಾಜಿ ಸಿಬ್ಬಂದಿಗಳಿಗೆ ವಿಧಿಸಲಾಗಿದ್ದಂತ ಶಿಕ್ಷೆಯನ್ನು ಕಡಿಮೆ ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ.
ಕತಾರ್ ಪೊಲೀಸರು ಬಂಧಿಸಿದ 8 ಮಾಜಿ ನೌಕಾಪಡೆಗಳಲ್ಲಿ ರಾಷ್ಟ್ರಪತಿ ಪ್ರಶಸ್ತಿ ವಿಜೇತ ಕಮಾಂಡರ್ ಪೂರ್ಣಂದು ತಿವಾರಿ (ಆರ್) ಕೂಡ ಸೇರಿದ್ದಾರೆ.
Advertisement. Scroll to continue reading.