ಬೆಂಗಳೂರು : ಕೆಲವು ವಿಶ್ವವಿದ್ಯಾಲಯಗಳು ಎಂಫಿಲ್ (ಮಾಸ್ಟರ್ ಆಫ್ ಫಿಲಾಸಫಿ) ಅಡ್ಮಿಷನ್‌ಗೆ ಹೊಸದಾಗಿ ಅರ್ಜಿ ಆಹ್ವಾನಿಸುತ್ತಿರುವುದು ಯುಜಿಸಿ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಎಂಫಿಲ್ ಪದವಿ ಮಾನ್ಯತೆ ಪಡೆದ ಪದವಿಯಲ್ಲ ಎನ್ನುವುದನ್ನು ಮತ್ತೊಮ್ಮೆ ಎಲ್ಲಾ ವಿಶ್ವವಿದ್ಯಾಲಯಗಳ ಗಮನಕ್ಕೆ ತರುತ್ತಿದ್ದೇವೆ ಎಂದು ಯುಜಿಸಿ ಪ್ರಕಟಣೆ ಹೊರಡಿಸಿದೆ.
ಯುಜಿಸಿ (ಪಿಎಚ್‌ಡಿ ಪದವಿ ಪ್ರಶಸ್ತಿಗಾಗಿ ಕನಿಷ್ಠ ಮಾನದಂಡಗಳು ಮತ್ತು ಕಾರ್ಯವಿಧಾನಗಳು) ನಿಯಮಗಳು, 2022 ರ ನಿಯಮಾವಳಿ ಸಂಖ್ಯೆ 14, ಉನ್ನತ ಶಿಕ್ಷಣ ಸಂಸ್ಥೆಗಳು ಯಾವುದೇ ಎಂಫಿಲ್ ಕಾರ್ಯಕ್ರಮವನ್ನು ನೀಡುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತದೆ ಎಂದು ಯುಜಿಸಿ ಕಾರ್ಯದರ್ಶಿ ಮನೀಶ್ ಜೋಶಿ ಹೇಳಿದ್ದಾರೆ.
2023-24ರ ಶೈಕ್ಷಣಿಕ ವರ್ಷಕ್ಕೆ ಅಂತಹ ಯಾವುದೇ ಎಂಫಿಲ್‌ಗೆ ಅಡ್ಮೀಷನ್‌ಅನ್ನು ನಿಲ್ಲಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಯೋಗವು ವಿಶ್ವವಿದ್ಯಾಲಯಗಳನ್ನು ಕೇಳಿದೆ. ಯಾವುದೇ ಎಂಫಿಲ್ ಕಾರ್ಯಕ್ರಮಕ್ಕೆ ಪ್ರವೇಶ ಪಡೆಯದಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ ಎಂದು ಜೋಶಿ ಹೇಳಿದರು.
Advertisement. Scroll to continue reading.
ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು (UGC) ಎಚ್ಚರಿಕೆಯನ್ನು ನೀಡಿದೆ. ವಿಶ್ವವಿದ್ಯಾನಿಲಯಗಳಿಂದ ಮಾಸ್ಟರ್ ಆಫ್ ಫಿಲಾಸಫಿ (ಎಂಫಿಲ್) ಕೋರ್ಸ್‌ಗಳನ್ನು ಮಾಡಲು ಇಚ್ಛೆ ಇರುವ ವಿದ್ಯಾರ್ಥಿಗಳಿಗೆ ಈ ಎಚ್ಚರಿಕೆಯನ್ನು ನೀಡಿದೆ.
ಯುಜಿಸಿ ಈಗಾಗಲೇ ಎಚ್ಚರಿಕೆ ನೀಡಿರುವ ಹೊರತಾಗಿಯೂ ಸಾಕಷ್ಟು ವಿವಿಗಳು ಈಗಲೂ ಕೂಡ ಎಂಫಿಲ್ ಕೋರ್ಸ್‌ಗಳು ನೀಡುವುದನ್ನು ಮುಂದುವರಿಸಿದೆ. ಈ ನಿಟ್ಟಿನಲ್ಲಿ ಮತ್ತೊಮ್ಮೆ ನೋಟಿಸ್ ಜಾರಿ ಮಾಡಿದೆ.
ಯುಜಿಸಿ ಈ ಹಿಂದೆ ಎಂಫಿಲ್ ಪದವಿಯನ್ನು ಕಾನೂನುಬಾಹಿರ ಎಂದು ಘೋಷಿಸಿತ್ತು. ಎಂಫಿಲ್ ಕಾರ್ಯಕ್ರಮಗಳನ್ನು ನೀಡದಂತೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಿತ್ತು.
ಇದಲ್ಲದೆ, 2023-24ರ ಶೈಕ್ಷಣಿಕ ವರ್ಷಕ್ಕೆ ಎಂಫಿಲ್ ಕಾರ್ಯಕ್ರಮಕ್ಕೆ ಪ್ರವೇಶವನ್ನು ಸ್ಥಗಿತಗೊಳಿಸುವಂತೆ ವಿಶ್ವವಿದ್ಯಾಲಯಗಳಿಗೆ ನಿರ್ದೇಶನವನ್ನೂ ನೀಡಲಾಗಿತ್ತು.
Advertisement. Scroll to continue reading.