ಬೆಂಗಳೂರು : ರಾಜ್ಯದಲ್ಲಿ ಇಂದು ಕೋವಿಡ್ ಹೆಚ್ಚಳವಾಗಿದೆ. ಇಂದು ಹೊಸದಾಗಿ 173 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇಬ್ಬರು ಸೋಂಕಿತರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಸಕ್ರಿಯ ಸೋಂಕಿತರ ಸಂಖ್ಯೆ 702ಕ್ಕೆ ಏರಿಕೆಯಾಗಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಿದೆ. ಕಳೆದ 24 ಗಂಟೆಯಲ್ಲಿ RTPCR ಮೂಲಕ 6400 ಮಂದಿಯನ್ನು, RAT ಮೂಲಕ 1949 ಸೇರಿದಂತೆ 8,349 ಜನರಿಗೆ ಕೊರೋನಾ ಪರೀಕ್ಷೆ ಮಾಡಲಾಗಿದೆ.
ಇವರಲ್ಲಿ 173 ಮಂದಿಗೆ ಕೋವಿಡ್ ಪಾಸಿಟಿವ್ ಎಂಬುದಾಗಿ ವರದಿಯಲ್ಲಿ ದೃಢಪಟ್ಟಿದೆ ಎಂದು ತಿಳಿಸಿದೆ.
Advertisement. Scroll to continue reading.
ಬೆಂಗಳೂರು ನಗರ 82, ಬಳ್ಳಾರಿ 06, ಬೆಳಗಾವಿ, ಚಿಕ್ಕಮಗಳೂರು, ಧಾರವಾಡ, ಕಲಬುರ್ಗಿ, ಕೊಡಗು ಹಾಗೂ ರಾಮನಗರ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ, ವಿಜಯನಗರ 07, ಉತ್ತರ ಕನ್ನಡ 02, ಶಿವಮೊಗ್ಗ 04, ಮೈಸೂರು 16, ಮಂಡ್ಯ 06, ಕೋಲಾರ 02, ಹಾಸನ 09, ಗದಗ 04, ದಾವಣಗೆರೆ 02, ದಕ್ಷಿಣ ಕನ್ನಡ 13, ಚಿತ್ರದುರ್ಗ 04, ಚಿಕ್ಕಬಳ್ಳಾಪುರ 06, ಚಾಮರಾಜನಗರ 04 ಕೋವಿಡ್ ಪ್ರಕರಣ ದೃಢಪಟ್ಟಿದೆ. ಬೆಂಗಳೂರಿನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.