ಉಡುಪಿ : ವ್ಯಕ್ತಿಯೊಬ್ಬರ ಅಕೌಂಟ್ಗೆ ಕನ್ನ ಹಾಕಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಪುತ್ತೂರು ಗ್ರಾಮದ ಪದ್ಮನಾಭ ಎಂಬವರು ವಂಚನೆಗೊಳಗಾದವರು.
ಅವರ ಕೆನರಾ ಬ್ಯಾಂಕ್ ಮಣಿಪಾಲ ಶಾಖೆಯಿಂದ 26 – 10 – 2023 ರಿಂದ 18 – 11 – 2023 ರ ನಡುವಿನ ಅವಧಿಯಲ್ಲಿ ಯಾರೋ ಅಪರಿಚಿತರು ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ.
24,000 ರೂಪಾಯಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
Advertisement. Scroll to continue reading.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.