ಬೆಂಗಳೂರು : ಹೊಸ ವರ್ಷವನ್ನು ಜನರು ಅದ್ದೂರಿಯಾಗಿಯೇ ಸ್ವಾಗತಿಸಿದ್ದಾರೆ. ಮದ್ಯಪ್ರಿಯರಂತೂ ಎಂಜಾಯ್ ಮಾಡಿದ್ದಾರೆ. ಹೀಗಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟಿಗಟ್ಟಲೆ ಹಣ ಹರಿದು ಬಂದಿದೆ.
2023ರ ಕೊನೆಯ ದಿನವಾದ ಭಾನುವಾರದಿಂದು 193 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿರುವ ಬಗ್ಗೆ ವರದಿಯಾಗಿದೆ.
ಈ ಮೂಲಕ ಒಂದೇ ದಿನ ಭರ್ಜರಿ ಲಿಕ್ಕರ್ ಸೇಲ್ ಆಗಿದೆ.
Advertisement. Scroll to continue reading.
ಡಿಸೆಂಬರ್ ತಿಂಗಳಲ್ಲಿ ಇಂಡಿಯನ್ ಮೇಡ್ ಲಿಕ್ಕರ್ 3,07,953 ಬಾಕ್ಸ್, ಬಿಯರ್ 1,95,005 ಬಾಕ್ಸ್ ಮಾರಾಟವಾಗಿದೆ.
ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ 2,611 ಕೋಟಿ ಆದಾಯ ಬಂದಿತ್ತು. ಈ ವರ್ಷ ಡಿಸೆಂಬರ್ ತಿಂಗಳಲ್ಲಿ 3 ಸಾವಿರ ಕೋಟಿ ಆದಾಯ ಸಂಗ್ರಹವಾಗಿದೆ. ಒಟ್ಟಿನಲ್ಲಿ ಎರಡು ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಮದ್ಯ ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ಆದಾಯ ಹರಿದುಬಂದಿದೆ.
ರಾಜ್ಯದ ಜನರು ಬಹಳ ಸಂಭ್ರಮದಿಂದ ಹೊಸ ವರ್ಷವನ್ನು ಸ್ವಾಗತಿಸಿದ್ದು, ಯುವಕರು, ಯುವತಿಯರು ಎಣ್ಣೆ ಕುಡಿದು ಸಂಭ್ರಮಿಸಿದ್ದಾರೆ.
Advertisement. Scroll to continue reading.