ನವದೆಹಲಿ : ಸೀಮಾ ಹೈದರ್ ಎನ್ನುವ ಹೆಸರು ನೀವು ಕೇಳಿರಬಹುದು. ಪಾಕಿಸ್ತಾನಿ ಮೂಲದ ಮಹಿಳೆ ತನ್ನ ನಾಲ್ವರು ಮಕ್ಕಳೊಂದಿಗೆ ನೇಪಾಳ ಮೂಲಕ ಭಾರತದ ಗಡಿಯನ್ನು ದಾಟಿ, ಭಾರತದಲ್ಲಿರುವ ತನ್ನ ಪ್ರೇಮಿ ಸಚಿನ್ ಜೊತೆ ಅಕ್ರಮವಾಗಿ ವಾಸ ಮಾಡಿದ್ದಳು. ಈ ವಿಚಾರ ಗೊತ್ತಾದ ಬಳಿಕ ಭಾರತದ ಭದ್ರತಾ ಅಧಿಕಾರಿಗಳಿಗೆ ಸಾಕಷ್ಟು ತನಿಖೆಗೆ ಒಳಗಾಗಿದ್ದರು. ಈ ಪಾಕ್ – ಭಾರತ್ ಲವ್ ಸ್ಟೋರಿ ಸಕತ್ ವೈರಲ್ ಕೂಡ ಆಗಿತ್ತು. ಆದರೆ, ಈ ಪ್ರೇಮ್ ಕಹಾನಿ ಮತ್ತೆ ಸುದ್ದಿಯಾಗಿದೆ.
ಇದೀಗ ಈ ದಂಪತಿ ಗುಡ್ ನ್ಯೂಸ್ ನೀಡಿದ್ದಾರೆ. ಪ್ರಸ್ತುತ ಗ್ರೇಟರ್ ನೋಯ್ಡಾದಲ್ಲಿ ವಾಸವಿರುವ ಸೀಮಾ ಹೈದರ್ ಈಗ ಸಚಿನ್ ಅವರ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ. 2019ರಲ್ಲಿ ಆನ್ಲೈನ್ ಗೇಮ್ ಪಬ್ಜೀ ಮೂಲಕ ಸಚಿನ್ ಮೀನಾ ಹಾಗೂ ಸೀಮಾ ಹೈದರ್ ಮೊದಲ ಬಾರಿಗೆ ಭೇಟಿಯಾಗಿದ್ದರು. ಆ ಬಳಿಕ ಇಬ್ಬರ ನಡುವೆ ಪ್ರೀತಿ ಉಂಟಾಗಿತ್ತು. 2023ರ ಮಾರ್ಚ್ನಲ್ಲಿ ಸೀಮಾ ಹಾಗೂ ಸಚಿನ್ ನೇಪಾಳದಲ್ಲಿ ಪರಸ್ಪರ ಭೇಟಿಯಾಗಿದ್ದರು. ಅದಾದ ಬಳಿಕ ಪಾಕಿಸ್ತಾನದ ಪ್ರಜೆಯಾಗಿರುವ ಸೀಮಾ ಹೈದರ್ ಗಡಿ ದಾಟಿ ಭಾರತಕ್ಕೆ ಆಗಮಿಸಿದ್ದರು.
ಅವರಿಬ್ಬರೂ ಭಾರತದಲ್ಲಿ ಮದುವೆಯಾಗಿದ್ದರು. ಸೀಮಾ ಹೈದರ್ ಅವರ ಹಿಂದಿನ ಮದುವೆಯಿಂದ ನಾಲ್ಕು ಮಕ್ಕಳಿದ್ದಾರೆ. ಹಿರಿಯ ಮಗುವಿಗೆ ಎಂಟು ವರ್ಷ.
ಸೀಮಾ ಮತ್ತು ಸಚಿನ್ ಅವರನ್ನು ಉತ್ತರ ಪ್ರದೇಶ ಪೊಲೀಸರು ಜುಲೈ 2023 ರಲ್ಲಿ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದಕ್ಕಾಗಿ ಬಂಧಿಸಿದ್ದರು. ಸೀಮಾ ಹೈದರ್ ಪಾಕಿಸ್ತಾನಿ ಗೂಢಚಾರಿಕೆ ಇರಬಹುದೆಂಬ ಶಂಕೆ ವ್ಯಕ್ತವಾಗಿದ್ದರಿಂದ ಅವರನ್ನೂ ಪೊಲೀಸರು ವಿಚಾರಣೆಗೊಳಪಡಿಸಿದ್ದರು. ಆದಾಗ್ಯೂ, ಪ್ರಯಾಣದ ನಿರ್ಬಂಧಗಳ ಷರತ್ತಿನ ಮೇಲೆ ಅವರನ್ನು ನಂತರ ಬಿಡುಗಡೆ ಮಾಡಲಾಯಿತು.
Advertisement. Scroll to continue reading.
Advertisement. Scroll to continue reading.