ಬೆಂಗಳೂರು : ರಾಜ್ಯದಲ್ಲಿ ಇಂದು ಕಳೆದ 24 ಗಂಟೆಯಲ್ಲಿ 148 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಸೋಂಕಿನಿಂದ ಓರ್ವ ಸಾವನ್ನಪ್ಪಿದ್ದಾರೆ. ಸಕ್ರಿಯ ಸೋಂಕಿತರ ಸಂಖ್ಯೆ 1,144ಕ್ಕೆ ಏರಿಕೆಯಾಗಿದೆ.
ಈ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಕಳೆದ 24 ಗಂಟೆಯಲ್ಲಿ ಆರ್.ಟಿ ಪಿಸಿಆರ್ ಮೂಲಕ 6,237, RAT ಮೂಲಕ 1068 ಸೇರಿದಂತೆ 7,305 ಮಂದಿಗೆ ಕೋವಿಡ್ ಪರೀಕ್ಷೆಯನ್ನು ಮಾಡಲಾಗಿದೆ ಎಂದು ತಿಳಿಸಿದೆ.
ಎಲ್ಲೆಲ್ಲಿ? ಎಷ್ಟು?
Advertisement. Scroll to continue reading.
ಬೆಂಗಳೂರು ನಗರದಲ್ಲಿ 75, ಗ್ರಾಮಾಂತರ 03, ಬಳ್ಳಾರಿ 04, ಚಿಕ್ಕಬಳ್ಳಾಪುರ 05, ಚಿತ್ರದುರ್ಗ 03, ದಕ್ಷಿಣ ಕನ್ನಡ 03, ಧಾರವಾಡ 01, ಗದಗ 03, ಹಾಸನ 18, ಕಲಬುರ್ಗಿ 01, ಕೋಲಾರ 01, ಮೈಸೂರು 02, ರಾಯಚೂರು 03, ತುಮಕೂರು 01, ಉತ್ತರ ಕನ್ನಡ 07 ಹಾಗೂ ವಿಜಯನಗರ 08 ಸೇರಿದಂತೆ 148 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
248 ಮಂದಿ ಗುಣಮುಖರಾಗಿದ್ದಾರೆ. ಹೀಗಾಗಿ ಸಕ್ರೀಯ ವಿಜಯನಗರದಲ್ಲಿ ಓರ್ವ ಸೋಂಕಿತ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದೆ.
Advertisement. Scroll to continue reading.