ಕೊಲ್ಲೂರು : ಮುದ್ರಸಾಲ ಯೋಜನೆಯಡಿ ಸಾಲ ಕೊಡಿಸುವುದಾಗಿ ನಂಬಿಸಿ ಸಾವಿರಾರು ರೂ. ವಂಚಿಸಿರುವ ಘಟನೆ ಕೊಲ್ಲೂರಿನಲ್ಲಿ ನಡೆದಿದೆ.
ಕಿರಣ ಕುಮಾರ್ ಎಂಬಾತ ಸೋಶಿಯಲ್ ಮೀಡಿಯ ಮೂಲಕ ಮುದ್ರ ಸಾಲ ಯೋಜನೆಯಲ್ಲಿ ಸಾಲ ಕೊಡಿಸುವುದಾಗಿ ಜಾಹಿರಾತಿನ ಮುಖಾಂತರ ಪ್ರಕಟಣೆಯನ್ನು ಹಾಕಿದ್ದು, ಸಂತೋಷ ಎಂಬವರು ಈ ಜಾಹೀರಾತು ನಂಬಿ ಡಿ.೮ ರಂದು ಕಿರಣನನ್ನು ಸಂಪರ್ಕಿಸಿದ್ದಾರೆ.
ಮುದ್ರ ಸಾಲ ಕೊಡಿಸುವುದಾಗಿ ಆತ ಹೇಳಿದ್ದಾನೆ. ಆತ ತಿಳಿಸಿದಂತೆ ಸಂತೋಷ ತನ್ನ ದಾಖಲಾತಿಗಳನ್ನು ಕಿರಣನ ವಾಟ್ಸ್ ಆಪ್‌ಗೆ ಕಳುಹಿಸಿದ್ದಾರೆ. ಅಲ್ಲದೇ ೩ ಕಂತುಗಳಲ್ಲಿ ೩೭,೯೫೫/- ರೂಪಾಯಿ ಹಣವನ್ನು ಆತನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದರು.
Advertisement. Scroll to continue reading.
ಆ ಬಳಿಕ ಆತನನ್ನು ಸಂಪರ್ಕಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದಾಖಲಾತಿಯನ್ನು ಪಡೆದು ಮುದ್ರ ಯೋಜನೆಯ ಸಾಲವನ್ನು ನೀಡದೆ ವಂಚಿಸಿದ್ದಾನೆ ಎಂದು ದೂರಲಾಗಿದೆ.
ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.