ಉಡುಪಿ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದಿಂದ ವಿಕಲಚೇತನರ ರಿಯಾಯಿತಿ ಬಸ್ ಪಾಸ್ ಅನ್ನು ಪಡೆಯಲು ಮತ್ತು ನವೀಕರಿಸಲು ಸೇವಾಸಿಂಧು ಪೋರ್ಟಲ್ https://sevasindhuservices.karnataka.gov.in ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
2023 ರಲ್ಲಿ ವಿತರಿಸಿದ ಬಸ್ಪಾಸ್ಗಳ ಅವಧಿಯು 2023 ರ ಡಿಸೆಂಬರ್ 31 ರಂದು ಮುಕ್ತಾಯಗೊಂಡಿದ್ದು, 2024 ನೇ ಜನವರಿ 15 ರಿಂದ ಹೊಸ ಪಾಸ್ಗಳನ್ನು ಪಡೆಯಲು ಮತ್ತು ನವೀಕರಿಸಲು ಕ್ರಮಕೈಗೊಳ್ಳಲಾಗಿರುತ್ತದೆ. 2023 ರಲ್ಲಿ ವಿತರಿಸಿರುವ ಬಸ್ಪಾಸ್ ಗಳನ್ನು 2024 ರ ಫೆಬ್ರವರಿ 29 ರ ವರೆಗೆ ಮಾನ್ಯ ಮಾಡಲಾಗುವುದು.
Advertisement. Scroll to continue reading.
ನಿಗಮದ ವಿಕಲಚೇತನರ ರಿಯಾಯಿತಿ ಬಸ್ ಪಾಸ್ಗಳನ್ನು ಪಡೆಯಲು ಫಲಾನುಭವಿಗಳು 02 ಇತ್ತೀಚಿನ ಭಾವಚಿತ್ರ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ವಿತರಿಸಿರುವ ಗುರುತಿನ ಚೀಟಿಯ ಮೂಲಪ್ರತಿ ಅಥವಾ ಹೊಸದಾಗಿ ನೀಡಲಾಗಿರುವ ಯು.ಡಿ.ಐಡಿ ಕಾರ್ಡಿನ ಮೂಲಪ್ರತಿ ಹಾಗೂ ಆಧಾರ್ ಕಾರ್ಡ್ ದಾಖಲಾತಿಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಮಂಗಳೂರು ವಿಭಾಗ, ಮಂಗಳೂರು ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ನಿಗಮದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement. Scroll to continue reading.