ಹುಬ್ಬಳ್ಳಿ : 1992ರ ಹುಬ್ಬಳ್ಳಿ ಗಲಭೆ ಪ್ರಕರಣ ಸಂಬಂಧ ಬಂಧಿತ ಕರಸೇವಕ ಶ್ರೀಕಾಂತ್ ಪೂಜಾರಿಯನ್ನು
ಇಂದು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
1992ರಲ್ಲಿ ನಡೆದಿದ್ದಂತ ಹುಬ್ಬಳ್ಳಿ ಗಲಭೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಕರಸೇವಕ ಶ್ರೀಕಾಂತ್ ಪೂಜಾರಿಯನ್ನು ಡಿ.29 ರಂದು ಬಂಧಿಸಲಾಗಿತ್ತು. ಶ್ರೀಕಾಂತ ಪೂಜಾರಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಶುಕ್ರವಾರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು.
ಈ ಹಿನ್ನಲೆಯಲ್ಲಿ ಹುಬ್ಬಳ್ಳಿಯ ಜೈಲಿನಿಂದ 1992ರ ಹುಬ್ಬಳ್ಳಿ ಶ್ರೀಕಾಂತ್ ಪೂಜಾರಿ ಅವರನ್ನು ಬಿಡುಗಡೆ ಮಾಡಲಾಗಿದೆ.
Advertisement. Scroll to continue reading.
ಜೈಲಿನಿಂದ ಹೊರ ಬರುತ್ತಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಹುಬ್ಬಳ್ಳಿಯ ಪೊಲೀಸರು ಮಾರ್ಕೆಟ್‌ಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿ ಡಿ.29ರಂದು ನನ್ನನ್ನು ಬರಲು ಹೇಳಿದರು. ನಾನು ಬೆಳಗಾವಿಯಲ್ಲಿದ್ದವನು ಬಂದು ಪೊಲೀಸರನ್ನು ಭೇಟಿಯಾದಾಗ ಮಾರುಕಟ್ಟೆಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿ ಜೈಲಿಗೆ ಕರೆದುಕೊಂಡು ಹೋಗಿದ್ದಾರೆ. ನನಗೆ ಯಾವುದೇ ನೋಟಿಸ್ ಅಥವಾ ಸಮನ್ಸ್ ಕೂಡ ನೀಡದೇ ಅರೆಸ್ಟ್ ಮಾಡಿದ್ದಾರೆ. ನಾನು ರಾಮ ಮಂದಿರ ಉದ್ಘಾಟನೆಗೆ ಹೋಗುತ್ತೇನೆ. ನನಗೆ ವಾರೆಂಟ್ ಕೊಟ್ಟಿಲ್ಲ, ಸಮನ್ಸ್ ಕೊಟ್ಟು ಬಂದಿದ್ದರು. ನನ್ನ ಮೇಲಿರುವ ಎಲ್ಲ ಕೇಸ್‌ಗಳು ಖುಲಾಸೆ ಮಾಡಿಕೊಂಡೇ ನಾನು ಜೈಲಿನಿಂದ ಹೊರಗಿದ್ದೇನೆ. ಆದರೆ, ಈ ಕೇಸನ್ನು ಮುಂದಿಟ್ಟುಕೊಂಡು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಾನು ಜೈಲಿಗೆ ಹೋದ ನಂತರ ಬಿಜೆಪಿ ನಾಯಕರು, ಮುಖಂಡರು, ಹಿಂದೂ ಸಂಘನೆಗಳ ಕಾರ್ಯಕರ್ತರು ಪ್ರತಿಭಟನೆ ಮಾಡಿ ಬಿಡುಗಡೆಗೆ ಆಗ್ರಹಿಸಿದ್ದಾರೆ. ಅವರೆಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ. ಇನ್ನು ಜ.22ರಂದು ನಡೆಯುವ ಅಯೋಧ್ಯೆಯ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೂ ನಾನು ಹೋಗುತ್ತೇನೆ ಎಂದು ತಿಳಿಸಿದರು.