ಬೆಂಗಳೂರು : ರಾಜ್ಯದಲ್ಲಿ ಇಂದು ಕೂಡ ಕೋವಿಡ್ ಆರ್ಭಟ ಮುಂದುವರೆದಿದೆ. ಇಂದು 297 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 1,136ಕ್ಕೆ ಏರಿಕೆಯಾಗಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದೆ. ಕಳೆದ 24 ಗಂಟೆಯಲ್ಲಿ RTPC ಮೂಲಕ 6,548 ಹಾಗೂ RAT ಮೂಲಕ 808 ಸೇರಿದಂತೆ ಒಟ್ಟು 7,356 ಮಂದಿಯನ್ನು ಕೋವಿಡ್ ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದೆ.
ಎಲ್ಲಿ? ಎಷ್ಟು ?
Advertisement. Scroll to continue reading.
ಬೆಂಗಳೂರು ನಗರ 171, ಬಾಗಲಕೋಟೆ 05, ಬಳ್ಳಾರಿ 06, ಬೆಂಗಳೂರು ಗ್ರಾಮಾಂತರ 12, ಚಾಮರಾಜನಗರ 02, ಚಿಕ್ಕಬಳ್ಳಾಪುರ 05, ಚಿತ್ರದುರ್ಗ 05, ದಕ್ಷಿಣ ಕನ್ನಡ 06, ದಾವಣಗೆರೆ 01, ಧಾರವಾಡ 08, ಗದಗ 02, ಹಾವೇರಿ 04, ಕಲಬುರ್ಗಿ 05, ಕೊಡಗು 01, ಕೋಲಾರ 03, ಕೊಪ್ಪಳ 08, ಮಂಡ್ಯ 06, ಮೈಸೂರು 26, ರಾಯಚೂರು 02,
ರಾಮನಗರ 06, ಶಿವಮೊಗ್ಗ, ವಿಜಯನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ತಲಾ 4, ವಿಜಯಪುರ 01 ಸೇರಿದಂತೆ 297 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದಿದೆ.
ಕಳೆದ 24 ಗಂಟೆಯಲ್ಲಿ ಸೋಂಕಿತರಾದಂತ 320 ಮಂದಿ ಗುಣಮುಖರಾಗಿದ್ದಾರೆ. ಇಂದು ಯಾವುದೇ ಕೋವಿಡ್ ಸೋಂಕಿನಿಂದ ಸಾವು ವರದಿಯಾಗಿಲ್ಲ ಎಂದು ತಿಳಿಸಿದೆ.
Advertisement. Scroll to continue reading.