ಉಡುಪಿ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಅಡಿ ಯುವ ಜನರನ್ನು ಸ್ವಾವಲಂಭಿಯನ್ನಾಗಿಸಲು ಜನವರಿ 24 ರಿಂದ ಫೆಬ್ರವರಿ 7 ರವರೆಗೆ ಈ ಕೆಳಗಿನಂತೆ ವಿವಿಧ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದ್ದು, ಅರ್ಹ ಆಸಕ್ತ ಯುವಕ ಹಾಗೂ ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.
15 ರಿಂದ 29 ವರ್ಷ ಒಳಗಿನ ಪದವಿ ಮತ್ತು ಜರ್ನಲಿಸಂ ವಿದ್ಯಾರ್ಹತೆ ಹೊಂದಿರುವ ಯುವಕ-ಯುವತಿಯರಿಗೆ ಜನವರಿ 31 ರಿಂದ ಫೆಬ್ರವರಿ 7 ರ ವರೆಗೆ ನಿರೂಪಣಾ ಮತ್ತು ವಾರ್ತಾವಾಚಕರ ತರಬೇತಿ, ದ್ವಿತೀಯ ಪಿ.ಯು.ಸಿ ವಿದ್ಯಾರ್ಹತೆ ಹೊಂದಿರುವವರಿಗೆ ಜ. 27 ರಿಂದ ಫೆ. 7 ರ ವರೆಗೆ ವಿಡಿಯೋಗ್ರಾಫೀ ತರಬೇತಿ ಮತ್ತು ಎಸ್.ಎಸ್.ಎಲ್.ಸಿ (ಪಾಸ್ ಅಥವಾ ಫೇಲ್) ವಿದ್ಯಾರ್ಹತೆ ಹೊಂದಿರುವ ಯುವಕ-ಯುವತಿಯರಿಗೆ ಜ. 26 ರಿಂದ ಫೆ. 7 ರ ವರೆಗೆ ಬ್ಯೂಟಿಷನ್ ತರಬೇತಿ ಹಾಗೂ 16 ರಿಂದ 30 ವರ್ಷದೊಳಗಿನ ದ್ವಿತೀಯ ಪಿ.ಯು.ಸಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಜ. 24 ರಿಂದ ಫೆ. 7 ರ ವರೆಗೆ ಜಿಮ್ ಮತ್ತು ಫಿಟ್ನೆಸ್ ತರಬೇತಿಯನ್ನು ನೀಡಲಾಗುವುದು.
Advertisement. Scroll to continue reading.
ಅರ್ಜಿ ಸಲ್ಲಿಸಲು ಜನವರಿ 20 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಅಜ್ಜರಕಾಡು, ಉಡುಪಿ ದೂ.ಸಂಖ್ಯೆ: 0820-2521324 ಮೊ.ಸಂಖ್ಯೆ:9480886467 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.